ಪರೀಕ್ಷಾ ಅಕ್ರಮ ಎಸಗಿದ ವಿದ್ಯಾರ್ಥಿಗಳಿಗೆ ಶಿಕ್ಷೆ
Team Udayavani, Jan 30, 2020, 3:00 AM IST
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆ ನಡೆಸಿದ ಡಿಪ್ಲೊಮಾ ಸಮಿಸ್ಟರ್ ಥಿಯರಿ ಪರೀಕ್ಷೆಯಲ್ಲಿ ವಿವಿಧ ರೀತಿಯ ಅಕ್ರಮ ಎಸಗಿದ 354 ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಿ ಇಲಾಖೆಯ ವಿದ್ಯಾರ್ಥಿ ಮಾಲ್ಪ್ರಾಕ್ಟಿಸ್ ವಿಚಾರಣಾ ಸಮಿತಿ ಶಿಫಾರಸು ಮಾಡಿದೆ. ನವೆಂಬರ್ ತಿಂಗಳಲ್ಲಿ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಪರೀಕ್ಷಾ ಅಕ್ರಮ ನಡೆಸಿದ 368 ವಿದ್ಯಾರ್ಥಿಗಳನ್ನು ಪತ್ತೆ ಮಾಡಲಾಗಿತ್ತು.
ವಿಚಾರಣಾ ಸಮಿತಿಯು ಈ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಕೊಠಡಿಯ ಮೇಲ್ವಿಚಾರಕರನ್ನು ವಿಚಾರಣೆ ನಡೆಸಿ. 14 ವಿದ್ಯಾರ್ಥಿಗಳನ್ನು ದೋಷಮುಕ್ತಗೊಳಿಸಿ, 354 ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಿದೆ. ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಬಳಸುತ್ತಿದ್ದ ಮೊಬೈಲ್, ಚೀಟಿಗಳು, ಎಲೆಕ್ಟ್ರಾನಿಕ್ಸ್ ಗೆಜೆಟ್ಸ್, ಕ್ಯಾಲಕುಲೇಟರ್ ಮೊದಲಾದ ದಾಖಲೆಗಳನ್ನು ಇಲಾಖೆಯ ನಿರ್ದೇಶಕರಿಗೆ ಒಪ್ಪಿಸಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.
ನಂತರ ಎಲ್ಲ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಗಡಿಸಲಾಗಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ತಿಳಿಸಿದೆ. ಆರೋಪ ಸಾಬೀತಾದ ವಿದ್ಯಾರ್ಥಿಗಳಲ್ಲಿ ಬಹುತೇಕರ ನವೆಂಬರ್ನಲ್ಲಿ ನಡೆದ ಥಿಯರಿ ಪರೀಕ್ಷೆಯನ್ನು ರದ್ದು ಮಾಡಿ, 2020ರ ಮಾರ್ಚ್ ನಲ್ಲಿ ನಡೆಯಲಿರುವ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ. ಗಂಭೀರ ಅಕ್ರಮ ಎಸಗಿದ ಕೆಲವೇ ಕೆಲವು ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಯನ್ನೇ ರದ್ದುಮಾಡಿ, 2023ರವರೆಗೂ ಪರೀಕ್ಷೆ ಬರೆಯದಂತೆ ನಿರ್ದೇಶನ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
ರಾಜ್ಯದಲ್ಲಿ ಕಾಂಗ್ರೆಸ್ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ
ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಈತ ಒಬ್ಬ ವಿಶಿಷ್ಟ ಕಳ್ಳ..ಕದ್ದ ಮೇಲೆ “ಐ ಲವ್ ಯೂ’ ಎಂದ!
ಏಷ್ಯನ್ ಕಪ್ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಭಾರತೀಯ ರೈಲ್ವೆಯಿಂದ ಜೂ. 21ರಿಂದ “ಶ್ರೀ ರಾಮಾಯಣ ಯಾತ್ರೆ’
ಕಬ್ಬಿಣದ ಅದಿರು ರಫ್ತು ನಿಷೇಧ ತೆರವು ಆದೇಶ: ಬಂದರಿಗೆ ಅದಿರು ಹರಿದು ಬರುವ ನಿರೀಕ್ಷೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ; ಜೂನ್ನಿಂದಲೇ ಸ್ಪೋಕನ್ ಇಂಗ್ಲಿಷ್ ತರಬೇತಿ