ಮಂಗಳೂರು : ಹಳಿ ತಪ್ಪಿದ ಮಂಗಳೂರು -ಚೆನ್ನೈ ಎಕ್ಸ್ಪ್ರೆಸ್ ರೈಲು
Team Udayavani, May 16, 2017, 1:10 PM IST
ಮಂಗಳೂರು: ಇಲ್ಲಿನ ಮಾರ್ನಮಿಕಟ್ಟೆ ಬಳಿ ಮಂಗಳೂರು -ಚೆನ್ನೈ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ.
ಅದೃಷ್ಟವಷಾತ್ ರೈಲಿನಲ್ಲಿ ಯಾವೊಬ್ಬ ಪ್ರಯಾಣಿಕರೂ ಇರಲಿಲ್ಲ. ಮಾರ್ನಮಿಕಟ್ಟೆ ಬಳಿ ಪ್ರತ್ಯೇಕ ಹಳಿಯಲ್ಲಿ ತಪ್ಪಿ ಹೋಗಿದ್ದು, ಇತರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.
ರೈಲು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಬೇಕಿತ್ತು.