ನರೇಗಾದಲ್ಲೂ ಮಹಿಳಾ ಮುನ್ನಡೆ!

ಕಾಯಕೋತ್ಸವಕ್ಕೆ ಮುಂದಾದ ಪಂಚಾಯತ್‌ ರಾಜ್‌ ಇಲಾಖೆ

Team Udayavani, Jan 19, 2021, 7:10 AM IST

ನರೇಗಾದಲ್ಲೂ ಮಹಿಳಾ ಮುನ್ನಡೆ!

ಬೆಂಗಳೂರು: ರಾಜ್ಯದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕಾರ್ಮಿಕರ ಕೆಲಸ ಅತ್ಯುತ್ತಮ ಎನ್ನಿಸಿಕೊಂಡಿದೆ.ಹೀಗಾಗಿ ಅವರ ಸಂಖ್ಯೆಯನ್ನು ಶೇ. 5ರಷ್ಟು ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಮುಂದಾಗಿದ್ದು, “ಮಹಿಳಾ ಕಾಯಕೋತ್ಸವ’ ಅಭಿಯಾನ ಆರಂಭಿಸಲಾಗಿದೆ.

ಒಟ್ಟು 51 ಲಕ್ಷ ಮಂದಿಗೆ ನರೇಗಾದಡಿ ಕೆಲಸ ನೀಡಲಾಗಿದ್ದು, ಈ ಸಾಲಿನಲ್ಲಿ 13 ಕೋಟಿ ಮಾನವ ದಿನ ಸೃಜನೆ ಹಂಚಿಕೆಯಾಗಿತ್ತು. ಕೊರೊನಾ ಬಳಿಕ ಬೇಡಿಕೆ ಹೆಚ್ಚಾಗಿದ್ದರಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚುವರಿ 1.10 ಕೋಟಿ ಮಾನವ ದಿನಗಳ ಹಂಚಿಕೆಯಾಗಿದೆ. 5 ವರ್ಷಗಳಲ್ಲಿ ರಾಜ್ಯಕ್ಕೆ ಸಿಕ್ಕ ಅತೀ ಹೆಚ್ಚು ಮಾನವ ದಿನಗಳು ಇವಾಗಿವೆ.

ಮಹಿಳೆಯರ ಪ್ರಾತಿನಿಧ್ಯ :

ಪ್ರಸ್ತುತ 48.94 ಶೇ.

ಗುರಿ 53.94  ಶೇ.

ಸಾಧನೆ 2.55 ಲಕ್ಷ

ಮಹಿಳೆಯರಿಗೆ ಹೆಚ್ಚುವರಿ ಕೆಲಸ :

ಮಹಿಳೆಯರಿಗೆ ಹೆಚ್ಚುವರಿ ಕೆಲಸ ಕೆಲಸ ಏನೇನು? ತೋಟಗಾರಿಕೆ, ಕೃಷಿ, ಬೆಳೆ ವಿಸ್ತರಣೆ, ಕರೆ ಹೂಳು ತೆಗೆಯುವುದು, ಕಂದಕ ನಿರ್ಮಾಣ, ಕೃಷಿ ಹೊಂಡ ನಿರ್ಮಾಣಕೂಲಿ

ಕೂಲಿ :

ಹಿಂದೆ

175 ರೂ.

ಕೋವಿಡ್  ಬಳಿಕ 275 ರೂ.

ದಕ್ಷಿಣ ಕನ್ನಡ, ಉಡುಪಿ: ತಲಾ 28 ಗ್ರಾ.ಪಂ. :

ಬಂಟ್ವಾಳ: “ಮಹಿಳಾ ಕಾಯಕೋತ್ಸವ’ ಸಮೀಕ್ಷೆ ಮೊದಲನೇ ತಿಂಗಳಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಲಾ 28 ಗ್ರಾ.ಪಂ.ಗಳಲ್ಲಿ ನಡೆಯಲಿದೆ.

ಪ್ರತೀ ತಾಲೂಕಿನಲ್ಲಿ ಮಹಿಳೆಯರ ಭಾಗವಹಿಸು ವಿಕೆ ಅತೀ ಕಡಿಮೆ ಇರುವ 4 ಗ್ರಾ.ಪಂ.ಗಳನ್ನು ಮೊದಲ ತಿಂಗಳು ಮತ್ತು 6 ಗ್ರಾ.ಪಂ.ಗಳನ್ನು 2ನೇ ತಿಂಗಳು ಆಯ್ಕೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಪ್ರತೀ ಗ್ರಾ.ಪಂ.ಗೆ ನಿರ್ದಿಷ್ಟ ಸಂಖ್ಯೆಯ ಸಮೀಕ್ಷಕರು ಇರಲಿದ್ದು, ಅವರು ದಿನಕ್ಕೆ ತಲಾ 50 ಮನೆಗಳಂತೆ 5 ದಿನಗಳಲ್ಲಿ 250 ಮನೆಗಳನ್ನು ಪೂರ್ಣಗೊಳಿಸಬೇಕಿದೆ. ಪ್ರಶ್ನೆಗಳ ನಮೂನೆ ಸಿದ್ಧಪಡಿಸಲಾಗಿದೆ.

ದಕ್ಷಿಣ ಕನ್ನಡ : ಮಹಿಳೆಯರ ಭಾಗವಹಿಸುವಿಕೆ 43  ಶೇ :ಮೊದಲ ತಿಂಗಳು: 7 ತಾಲೂಕುಗಳು, ತಲಾ 4 ಗ್ರಾ.ಪಂ.

ಉಡುಪಿ : ಮಹಿಳೆಯರ ಭಾಗವಹಿಸುವಿಕೆ  61.2 ಶೇ : ಮೊದಲ ತಿಂಗಳು:  7 ತಾಲೂಕುಗಳು, ತಲಾ 4 ಗ್ರಾ.ಪಂ.

ದಕ್ಷಿಣ ಕನ್ನಡ, ಉಡುಪಿ: ತಲಾ 28 ಗ್ರಾ.ಪಂ.ಗಳಲ್ಲಿ “ಕಾಯಕೋತ್ಸವ’ :

ಮಹಿಳೆಯರ ಭಾಗವಹಿಸುವಿಕೆ: ಶೇ. 43

ಮೊದಲ ತಿಂಗಳು: 7 ತಾಲೂಕು, ತಲಾ 4 ಗ್ರಾ.ಪಂ.

ಬಂಟ್ವಾಳ ತಾಲೂಕು: ಕುರ್ನಾಡು, ಫಜೀರು, ಪೆರುವಾಯಿ, ಸಜೀಪಪಡು, ಬೆಳ್ತಂಗಡಿಯ ಮುಂಡಾಜೆ, ಮಲವಂತಿಗೆ, ಚಾರ್ಮಾಡಿ, ಶಿಶಿಲ

ಕಡಬ : ಕೊಯಿಲ, ಬೆಳಂದೂರು, ಆಲಂಕಾರು, ಗೋಳಿತೊಟ್ಟು

ಮಂಗಳೂರು: ಸೂರಿಂಜೆ, ಮಂಜನಾಡಿ, ಬಡಗ ಎಡಪದವು, ಪೆರ್ಮುದೆ

ಮೂಡುಬಿದಿರೆ: ತೆಂಕಮಿಜಾರು, ಇರುವೈಲು, ಪಾಲಡ್ಕ, ಪಡುಮಾರ್ನಾಡು

ಪುತ್ತೂರು: ಬಲ್ನಾಡು, ಕಬಕ, ಬಜತ್ತೂರು, ಪಾಣಾಜೆ

ಸುಳ್ಯ: ಪಂಜ, ಕಲ್ಮಡ್ಕ, ಬಾಳಿಲ, ಕಳಂಜ

ಉಡುಪಿ :

ಮಹಿಳೆಯರ ಭಾಗವಹಿಸುವಿಕೆ: ಶೇ. 61.2

ಮೊದಲ ತಿಂಗಳು: 7 ತಾಲೂಕು, ತಲಾ 4 ಗ್ರಾ.ಪಂ.

ಉಡುಪಿ ತಾಲೂಕು: ಆತ್ರಾಡಿ, ಮಣಿಪುರ, 80 ಬಡಗಬೆಟ್ಟು, ಕುಕ್ಕೆಹಳ್ಳಿ

ಬ್ರಹ್ಮಾವರ: ಆರೂರು, ಚೇರ್ಕಾಡಿ, ಕರ್ಜೆ, ಯಡ್ತಾಡಿ

ಬೈಂದೂರು: ಗೋಳಿಹೊಳೆ, ಜಡ್ಕಲ್‌, ಕಾಲ್ತೋಡು, ಕೊಲ್ಲೂರು

ಹೆಬ್ರಿ: ಚಾರ, ಹೆಬ್ರಿ, ಶಿವಪುರ, ವರಂಗ

ಕಾಪು: ಪಲಿಮಾರು, ಮಜೂರು, ಪಡುಬಿದ್ರಿ, ಇನ್ನಂಜೆ

ಕಾರ್ಕಳ: ದುರ್ಗ, ಈದು, ಸಾಣೂರು, ಕಡ್ತಲ

ಕುಂದಾಪುರ: 74 ಉಳ್ಳೂರು, ಚಿತ್ತೂರು, ಕೆದೂರು, ಮೊಳಹಳ್ಳಿ

ನರೇಗಾದಡಿ ಮಹಿಳಾ ಕಾರ್ಮಿಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಕಾರ್ಮಿಕರ ಪ್ರಮಾಣ ಶೇ. 5ರಷ್ಟು ಹೆಚ್ಚಿಸಲು ಮಹಿಳಾ ಕಾಯಕೋತ್ಸವ ಅಭಿಯಾನ ಆರಂಭಿಸಿದ್ದೇವೆ. ಇದರಿಂದ ಒಟ್ಟಾರೆ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ಶೇ. 53.94 ಆಗಲಿದೆ.-ಅನಿರುದ್ಧ್ ಶ್ರವಣ್‌, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ

ನರೇಗಾದಲ್ಲಿ ಮಹಿಳೆಯ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಕಡೆ ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತೀ ತಾಲೂಕಿನಿಂದ 4 ಗ್ರಾ.ಪಂ.ಗಳಲ್ಲಿ ಮೊದಲ ತಿಂಗಳು ಸಮೀಕ್ಷೆ ನಡೆಯುತ್ತದೆ.ಡಾ| ಸೆಲ್ವಮಣಿ ಆರ್‌., ದ.ಕ. ಜಿ.ಪಂ. ಸಿಇಒ

ನರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಉಡುಪಿಯು ರಾಜ್ಯ ದಲ್ಲೇ ಮುಂದಿದೆ. ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಮಹಿಳಾ ಕಾಯಕೋತ್ಸವವನ್ನು ನಮ್ಮಲ್ಲೂ ಆರಂಭಿಸಲಾಗಿದೆ. ನರೇಗಾದ ಕುರಿತು ಮಹಿಳೆಯರಿಗೆ ತಿಳುವಳಿಕೆ ಇದೆಯೇ ಎಂಬುದನ್ನು ಸರ್ವೇ ಮೂಲಕ ತಿಳಿದುಕೊಳ್ಳಲಾಗುತ್ತದೆ.ಡಾ| ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

  ಎಸ್‌. ಲಕ್ಷ್ಮೀನಾರಾಯಣ/ ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಶೀಘ್ರವೇ ರಾಜ್ಯಾದ್ಯಂತ ಹಾಲಿಗೆ ಏಕರೂಪ ದರ

ಶೀಘ್ರವೇ ರಾಜ್ಯಾದ್ಯಂತ ಹಾಲಿಗೆ ಏಕರೂಪ ದರ

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಟ್ರೇಲರ್‌, ಟೀಸರ್‌, ಸಾಂಗ್ಸ್‌ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

Anarchy if the police stop duty

ಪೊಲೀಸರು ಕರ್ತವ್ಯ ನಿಲ್ಲಿಸಿದರೆ ಅರಾಜಕತೆ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

ಸರಕಾರದ ನಿರ್ಲಕ್ಷದಿಂದಾಗಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ: ಸಿದ್ದರಾಮಯ್ಯ

police14

ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.