ಪೋಲೆಂಡ್‌, ಇತರ ದೇಶಗಳತ್ತ 1.2 ಲಕ್ಷ ಮಂದಿ ವಲಸೆ


Team Udayavani, Feb 27, 2022, 8:00 AM IST

ಪೋಲೆಂಡ್‌, ಇತರ ದೇಶಗಳತ್ತ 1.2 ಲಕ್ಷ ಮಂದಿ ವಲಸೆ

ರಷ್ಯಾ ದೇಶ, ಉಕ್ರೇನ್‌ನ ಮೇಲೆ ಯುದ್ಧ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಉಕ್ರೇನ್‌ನ ಸುಮಾರು 1.20 ಲಕ್ಷ ಜನರು ಪಕ್ಕದ ಪೋಲೆಂಡ್‌ ಹಾಗೂ ಇನ್ನಿತರ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ. ಗುರುವಾರ ಹಾಗೂ ಶುಕ್ರವಾರಗಳ 48 ಗಂಟೆಗಳಲ್ಲೇ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ ತಿಳಿಸಿದೆ.

ಉಕ್ರೇನ್‌ನ ನಾನಾ ಪಟ್ಟಣಗಳು, ಹಳ್ಳಿಗ­ಳಿಂದ ಜನರು, ಹಗಲು ರಾತ್ರಿಯೆನ್ನದೆ, ತಮ್ಮ ಮಕ್ಕಳು, ಸಾಮಾನು- ಸರಂಜಾಮುಗಳನ್ನು ಕಟ್ಟಿಕೊಂಡು ಗುಂಪಾಗಿ ಗಡಿಗಳತ್ತ ನಡೆದು ಹೋಗುತ್ತಿರುವ ದೃಶ್ಯಗಳು ಈಗ ಮಾಮೂಲು ಎಂಬಂತಾಗಿದೆ. ಕೆಲವರು, ಕಾರು, ಬಸ್‌, ಟೆಂಪೋಗಳನ್ನು ಹತ್ತಿಕೊಂಡು ಗಡಿಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಇತರ ರಾಷ್ಟ್ರಗಳಲ್ಲಿರುವ ಅವರ ಸ್ನೇಹಿತರು, ಸಂಬಂಧಿಕರು, ಗಡಿಗಳಲ್ಲಿ ನಿಂತು ತಮ್ಮವರನ್ನು ಸ್ವಾಗತಿಸಿ ಕರೆದುಕೊಂಡು ಹೋಗುತ್ತಿದ್ದಾರೆ. ಆಯಾ ದೇಶಗಳ ಸರಕಾರಗಳು ಗಡಿಗಳಲ್ಲಿ ಉಕ್ರೇನ್‌ನಿಂದ ಬರುತ್ತಿರುವ ನಿರಾಶ್ರಿತರಿಗಾಗಿ ಸ್ವಾಗತ ಕೇಂದ್ರಗಳನ್ನು ತೆರೆದಿವೆ.

ಪೋಲೆಂಡ್‌ ಮಾನವೀಯತೆ: ಅದರಲ್ಲೂ ಈ ವಿಚಾರದಲ್ಲಿ ಮುಂದಿರುವುದು ಶ್ಲಾಘನೀಯ. 90ರ ದಶಕದಲ್ಲಿ ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಬಂದಿದ್ದ ವಲಸಿಗರನ್ನು ತನ್ನಲ್ಲಿ ಬಿಟ್ಟುಕೊಂಡು ಅನಂತರ ಮೂಲಸೌಕರ್ಯ ಮುಂತಾದ ವಿಚಾರಗಳಲ್ಲಿ ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ಆಂತರಿಕ ಸಂಘರ್ಷ ನಡೆದಿದ್ದನ್ನು ಕಣ್ಣಾರೆ ಕಂಡಿದ್ದರೂ ಈಗ ಉಕ್ರೇನ್‌ನಿಂದ ಬರುವ ನಿರಾಶ್ರಿತರನ್ನು ಕೈಬೀಸಿ ಕರೆಯುತ್ತಾ ಮಾನವೀಯತೆ ಮೆರೆಯುತ್ತಿದೆ.

ಅಜ್ಜ, ಅಜ್ಜಿಯನ್ನು ಬಿಟ್ಟು ಬಂದಿದ್ದಕ್ಕೆ ಕಣ್ಣೀರು!
ಉಕ್ರೇನ್‌ನ ಚೆರ್ನಿವ್‌ಟ್ಸೆ ನಗರದಿಂದ ಬಂದಿದ್ದ ಕುಟುಂಬ 20 ಗಂಟೆಗಳ ನಡೆದು ಪೋಲೆಂಡ್‌ ಗಡಿ ತಲುಪಿದೆ. ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈ ಕುಟುಂಬದ 14 ವರ್ಷದ ಬಾಲೆ ನಟಾಲಿಯಾ ಗೌರ್ನಿಕ್‌, ನಡೆಯಲಾಗದ ತಮ್ಮ ಅಜ್ಜ-ಅಜ್ಜಿಗೆ ಮನಸ್ಸಿಲ್ಲದ ಮನಸ್ಸಿನಿಂದ ಬಿಟ್ಟು ಬಂದಿದ್ದಕ್ಕೆ ಕಣ್ಣೀರು ಹಾಕಿದ್ದಾಳೆ. “ಯುದ್ಧ ನಿಂತರೆ ಸಾಕು, ನನ್ನ ಅಜ್ಜ-ಅಜ್ಜಿಯರನ್ನು ನೋಡಲು ನಾನು ನನ್ನೂರಿಗೆ ಓಡಿ ಹೋಗುವೆ’ ಎಂದು ಅಲವತ್ತುಕೊಂಡಿದ್ದಾಳೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.