11 ರಾಜಕುಮಾರರು ನಾಲ್ವರು ಸಚಿವರ ಸೆರೆ
Team Udayavani, Nov 6, 2017, 6:35 AM IST
ರಿಯಾದ್: ಸೌದಿ ಅರೇಬಿಯಾದಲ್ಲಿ ಭ್ರಷ್ಟಾಚಾರ ನಿಗ್ರಹದ ಮಹತ್ವದ ಕ್ರಮವಾಗಿ ಪ್ರಮುಖ ಶತಕೋಟ್ಯಧಿಪತಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಸೇರಿದಂತೆ 11 ರಾಜಕುಮಾರರು, ನಾಲ್ವರು ಸಚಿವರು ಮತ್ತು 10 ಮಾಜಿ ಸಚಿವರನ್ನು ಬಂಧಿಸಲಾ ಗಿದೆ. ಈ ಕುರಿತು ಸೌದಿ ಅರೇಬಿಯಾದ ಅಧಿಕೃತ ಸುದ್ದಿವಾಹಿನಿ ವರದಿ ಮಾಡಿದ್ದು, ಸಂಚಲನಕ್ಕೆ ಕಾರಣವಾಗಿದೆ.
ಅಲ್ವಲೀದ್ ಬಂಧನ ಕೇವಲ ಸೌದಿಯ ಲ್ಲಷ್ಟೇ ಅಲ್ಲ, ವಿಶ್ವದ ಹಲವು ಕಂಪನಿಗಳಿಗೂ ಆಘಾತ ನೀಡಿದೆ. ಯಾಕೆಂದರೆ ಅಲ್ವಲೀದ್, ರಾಜಮನೆತನದ ಕಿಂಗ್‌ಡಮ್ ಹೋಲ್ಡಿಂಗ್ ಕಂಪನಿಯ ನೇತೃತ್ವ ವಹಿಸಿದ್ದು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರು. ಅಷ್ಟೇ ಅಲ್ಲ, ನ್ಯೂಸ್ ಕಾರ್ಪ್, ಸಿಟಿ ಗ್ರೂಪ್, ಟ್ವಿಟರ್ ಮತ್ತು ಇತರ ಹಲವು ಪ್ರಮುಖ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅರಬ್‌ನ ಹಲವು ಸುದ್ದಿಸಂಸ್ಥೆಗಳಲ್ಲೂ ಅವರ ಹೂಡಿಕೆಯಿದೆ.
ಈ ಕ್ರಮದಿಂದಾಗಿ ರಾಜ ಸಲ್ಮಾನ್‌ನ ಆತ್ಮೀಯ ಪುತ್ರ ರಾಜಕುಮಾರ ಮೊಹ ಮ್ಮದ್ ಬಿನ್ ಸಲ್ಮಾನ್(ಭಾವೀ ದೊರೆ)ಗೆ ಹೆಚ್ಚು ಅಧಿಕಾರ ನೀಡಿದಂತಾಗಿದೆ. ಈಗಾ ಗಲೇ ಸೌದಿಯಲ್ಲಿ ಮನೆ ಮಾ ತಾ ಗಿರುವ ಮೊಹಮ್ಮದ್ ಬಿನ್ ಸಲ್ಮಾನ್, ದೇಶದ ಸೇನೆ, ವಿದೇಶಾಂಗ ವ್ಯವಹಾರ, ಆರ್ಥಿಕತೆ ಮತ್ತು ಸಾಮಾಜಿಕ ನೀತಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಕೇವಲ 32 ವರ್ಷದಲ್ಲೇ ಅವರಿಗೆ ವಿಶೇಷ ಅಧಿಕಾರ ನೀಡಲಾಗಿದೆ.
ಹೋಟೆಲ್ ತಾತ್ಕಾಲಿಕ ಜೈಲು: ರಿಯಾದ್‌ನ ರಿಟ್ಜ್ ಕಾರ್ಲ್ಟನ್ ಹೋಟೆಲ್ ಅನ್ನು ಖಾಲಿ ಮಾಡಿಸಲಾಗಿದ್ದು, ಬಂಧಿತ ರಾಜಕು ಮಾರರನ್ನು ಇಲ್ಲಿರಿಸಲಾ ಗುತ್ತದೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಖಾಸಗಿ ವಿಮಾನಗಳಿಗೆ ಅವಕಾಶ ನೀಡು ತ್ತಿಲ್ಲ. ಇದರಿಂದಾಗಿ ಇತರ ರಾಜಕುಮಾ ರರೂ ದೇಶದಿಂದ ಹೊರಗೆ ತೆರಳದಂತೆ ನಿರ್ಬಂಧಿಸಲಾಗುತ್ತಿದೆೆ. ಆದರೆ ಈಗಾಗಲೇ ಬಂಧಿಸಲಾಗಿರುವ ರಾಜಕುಮಾರರ ಆಸ್ತಿಯನ್ನೂ ಮುಟ್ಟುಗೋಲು ಮಾಡಲಾ ಗಿದೆಯೇ ಎಂಬುದು ಖಚಿತಪಟ್ಟಿಲ್ಲ.
ಭ್ರಷ್ಟಾಚಾರದ ಆರೋಪ ಎಷ್ಟು ನಿಜ?: ಅಲ್ವಲೀದ್ ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಗಳಿಸಿದ್ದು ಹಲವರ ಹುಬ್ಬೇರಿಸಿತ್ತು. ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಊಹಾಪೋಹಗಳೂ ಕೇಳಿಬಂದಿತ್ತು. ಆದರೆ ಸೌದಿ ರಾಜಮನೆತನವೇ ಸರ್ಕಾರ ನಡೆಸುತ್ತಿರುವುದರಿಂದ ಅವರ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ವಿಚಾರಣೆ ನಡೆಸುವುದಾಗಲೀ, ಸಾಬೀತುಗೊಳಿಸುವು ದಾಗಲೀ ಸುಲಭ ಸಾಧ್ಯ ಆಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ಧನ್ಯವಾದ ಹೇಳಿದ ಲಂಕಾ
ಮಂಕಿ ಪಾಕ್ಸ್ ಆತಂಕಕಾರಿ ವಿಷಯ: ಅಮೆರಿಕಾ ಅಧ್ಯಕ್ಷ ಜೋ ಬಿಡನ್
ತೈಲ ಸುಂಕ ಇಳಿಸಿದ ಮೋದಿ ಸರ್ಕಾರದ ನಿರ್ಧಾರವನ್ನು ಹಾಡಿಹೊಗಳಿದ ಇಮ್ರಾನ್ ಖಾನ್
ಮಂಕಿಪಾಕ್ಸ್ಗೆ ಬ್ರೆಜಿಲ್ನಲ್ಲಿ 21 ದಿನ ಕಡ್ಡಾಯ ಕ್ವಾರಂಟೈನ್
ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ