ಭೂಮಿಯ ಸನಿಹಕ್ಕೆ 3 ಕ್ಷುದ್ರ ಗ್ರಹ; ನಾಸಾ
Team Udayavani, Aug 13, 2022, 6:15 AM IST
ವಾಷಿಂಗ್ಟನ್: ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಮೂರು ಕ್ಷುದ್ರ ಆಕಾಶ ಕಾಯಗಳು ಭೂಮಿಗೆ ಅತೀ ಸನಿಹವಾಗಿ ಹಾದುಹೋಗಲಿವೆ. ಇವುಗಳಲ್ಲಿ ಅತೀ ದೊಡ್ಡದಾಗಿರುವ 110 ಅಡಿ ಅಗಲದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಪ್ಯಾರಿಸ್ನಷ್ಟು ದೊಡ್ಡದಾದ ಕುಳಿ ಉಂಟಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಆದರೆ ಅಪ್ಪಳಿಸುವ ಸಾಧ್ಯತೆ ಅತ್ಯಲ್ಪ. ಈ ಕ್ಷುದ್ರ ಕಾಯ ರವಿವಾರ ಬೆಳಗ್ಗೆ ಭೂಮಿಯಿಂದ 47 ಲಕ್ಷ ಕಿ.ಮೀ. ದೂರದಲ್ಲಿ ಪ್ರತೀ ಸೆಕುಂಡಿಗೆ 5.7 ಕಿ.ಮೀ. ವೇಗದಲ್ಲಿ ಹಾದುಹೋಗಲಿದೆ.
ಆಸ್ಟರಾಯ್ಡ ವಾಚ್ ನಿಗಾ: ನಾಸಾದ ಆಸ್ಟರಾಯ್ಡ ವಾಚ್ ಭೂಮಿಗೆ 75 ಲಕ್ಷ ಕಿ.ಮೀ. ಆಸುಪಾಸಿಗೆ ಬರುವ ಕ್ಷುದ್ರಗ್ರಹ, ಧೂಮಕೇತುಗಳ ಬಗ್ಗೆ ನಿಗಾ ಇರಿಸುತ್ತದೆ. ಭೂಮಿಯಿಂದ ಇಷ್ಟು ದೂರದಲ್ಲಿ ಹಾದುಹೋಗುವ 150 ಮೀ.ಗಳಿಗಿಂತ ದೊಡ್ಡದಾದ ಕ್ಷುದ್ರಕಾಯಗಳನ್ನು “ಅಪಾಯಕಾರಿ’ ಎಂದು ಗುರುತಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ