US ಷಿಕಾಗೋದ ಉಪನಗರ ವ್ಯಾಪ್ತಿಯಲ್ಲಿ 8 ಮಂದಿಯ ಹತ್ಯೆ
Team Udayavani, Jan 24, 2024, 12:25 AM IST
ಷಿಕಾಗೋ: ಅಮೆರಿಕದ ಷಿಕಾಗೋದ ಉಪನಗರ ವ್ಯಾಪ್ತಿಯಲ್ಲಿ ವಕ್ತಿಯೊಬ್ಬ ಎಂಟು ಮಂದಿಯನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಆತನ ಜತೆಗೆ ಪೊಲೀಸರು ಗುಂಡಿನ ಚಕಮಕಿಯನ್ನೂ ನಡೆಸಿದ್ದಾರೆ. ಎನ್ಕೌಂಟರ್ ವೇಳೆ ಕೃತ್ಯವೆಸಗಿದ ವ್ಯಕ್ತಿ ರೋಮ್ಯಾ ನಾನ್ಸ್ ಎಂಬಾತ ತನಗೆ ತಾನೇ ಗುಂಡು ಹಾರಿಸಿಕೊಂಡ ಘಟನೆ ನಡೆದಿದೆ. ಪೊಲೀಸರಿಗೆ ಷಿಕಾಗೋದಲ್ಲಿ ಎಂಟು ಮಂದಿ ಯನ್ನು ಹತ್ಯೆ ಮಾಡಿ ವ್ಯಕ್ತಿ ಪರಾರಿಯಾಗುತ್ತಿದ್ದ ಬಗ್ಗೆ ಖಚಿತ ಸಿಕ್ಕಿದ ಕೂಡಲೇ ಆತನನ್ನು ತಡೆಯಲು ಪ್ರಯತ್ನಿಸಿದರು. ಕೊಂಚ ಅವಧಿಗೆ ಗುಂಡಿನ ಚಕಮಕಿಯೂ ನಡೆದಿತ್ತು.