Afghanistan:ಸಾರ್ವಜನಿಕವಾಗಿ ಗುಂಡಿಕ್ಕಿ ಅಪರಾಧಿಯ ಹತ್ಯೆ!
Team Udayavani, Feb 27, 2024, 12:08 AM IST
ಸಾಂದರ್ಭಿಕ ಚಿತ್ರ ಮಾತ್ರ
ಕಾಬೂಲ್: ಅಫ್ಘಾನಿಸ್ಥಾನದ ಉತ್ತರ ಜಾವಾನ್ ಪ್ರಾಂತದ ಶಿಬಿರ್ಘಾನ್ ನಗರದ ಕ್ರೀಡಾಂಗ ಣವೊಂದರಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಕೊಲೆಗಾರನೊಬ್ಬನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಇದು ಅಫ್ಘಾನ್ನಲ್ಲಿ ಕಳೆದ 5 ದಿನಗಳಲ್ಲಿ ನಡೆದ 3ನೇ ಮರಣದಂಡನೆ ಪ್ರಕರಣ ಇದಾಗಿದೆ.
ಕ್ರೀಡಾಂಗಣದ ಸುತ್ತಲೂ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಾಜರ್ ಮೊಹಮ್ಮದ್ ಎಂಬಾತನೇ ಮರಣದಂಡನೆಗೆ ಗುರಿಯಾದ ವ್ಯಕ್ತಿ. ಕೊಲೆ ಪ್ರಕರಣದಲ್ಲಿ ಈತನಿಗೆ ಮರಣದಂಡನೆ ಘೋಷಿಸಲಾಗಿತ್ತು. ಕೊಲೆಯಾದ ವ್ಯಕ್ತಿಯ ಸಹೋದರನೇ ಶಿಕ್ಷೆಯ ದಿನವಾದ ಸೋಮವಾರ ಸಾವಿರಾರು ಮಂದಿಯ ಸಮ್ಮುಖದಲ್ಲಿ 5 ಸುತ್ತು ಗುಂಡು ಹಾರಿಸಿ ಅಪರಾಧಿ ನಾಜರ್ ಮೊಹಮ್ಮದ್ನನ್ನು ಕೊಂದಿದ್ದಾನೆ. ಗುರುವಾರವಷ್ಟೇ ತಾಲಿಬಾನ್ ಸರಕಾರವು ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿತ್ತು.