Palestinian ಪರ ಘೋಷಣೆ ಕೂಗುತ್ತಾ ಬೆಂಕಿ ಹಚ್ಚಿಕೊಂಡ ಅಮೆರಿಕ ಯೋಧ!
Team Udayavani, Feb 27, 2024, 5:56 AM IST
ವಾಷಿಂಗ್ಟನ್: ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಘೋಷಣೆ ಕೂಗುತ್ತಾ ವಾಷಿಂಗ್ಟನ್ನ ಇಸ್ರೇಲ್ ರಾಯಭಾರ ಕಚೇರಿ ಮುಂಭಾಗದಲ್ಲಿ ಅಮೆರಿಕ ವಾಯುಪಡೆಯ ಯೋಧ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಆರೋನ್ ಬುಶ್ನೆಲ್(25)ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾನೆ. ಪ್ಯಾಲೆಸ್ತೀನ್ನಲ್ಲಿ ಸೇನಾ ಕಾರ್ಯಾಚರಣೆ ಹೆಸರಿನಲ್ಲಿ ಇಸ್ರೇಲ್ ನರಮೇಧವನ್ನೇ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಆತ, ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದ.
ಬುಶ್ನೆಲ್ ತನ್ನ ಯೋಜಿತ ಸ್ವಯಂ-ದಹನಕ್ಕೆ ಮುನ್ನ ಮಾಧ್ಯಮಗಳಿಗೆ ಸಂದೇಶವನ್ನು ಕಳುಹಿಸಿದ್ದ “ಇಂದು, ನಾನು ಪ್ಯಾಲೆಸ್ತೀನಿಯನ್ ಜನರ ನರಮೇಧದ ವಿರುದ್ಧ ತೀವ್ರ ಪ್ರತಿಭಟನೆಯಲ್ಲಿ ತೊಡಗಲು ಯೋಜಿಸುತ್ತಿದ್ದೇನೆ” ಎಂದು ಅವರು ವೀಡಿಯೋದಲ್ಲಿ ಹೇಳಿದ್ದ. ಸ್ಥಳೀಯ ಪೊಲೀಸ್ ಮತ್ತು ರಹಸ್ಯ ಸೇವೆ ಘಟನೆಯ ತನಿಖೆ ನಡೆಸುತ್ತಿದೆ.