ಪುಟಾಣಿ ಯುವರಾಜನೇ ಐಸಿಸ್ ಉಗ್ರರ ಟಾರ್ಗೆಟ್!
Team Udayavani, Oct 30, 2017, 11:35 AM IST
ಲಂಡನ್: ಬ್ರಿಟನ್ನ ಪುಟಾಣಿ ಯುವರಾಜ ನಾಲ್ಕು ವರ್ಷದ ಜಾರ್ಜ್ ಈಗ ಐಸಿಸ್ ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದಾನೆಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.
ಬ್ರಿಟನ್ನ ರಾಜನ ಪಟ್ಟಕ್ಕೆ ಏರುವವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಜಾರ್ಜ್, ತನ್ನ ತಂದೆ ಪ್ರಿನ್ಸ್ ವಿಲಿಯಮ್ಸ್ ಮತ್ತು ತಾಯಿ ಕೇಟ್ ಮಿಡಲ್ಟನ್ ಹಾಗೂ ಬ್ರಿಟನ್ ರಾಣಿ ಎಲಿಜಬೆತ್ ಜತೆಗೆ ಇರುವ ಫೋಟೋವೊಂದನ್ನು ಐಸಿಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ಅದರ ಕೆಳಗಿನ ಅಡಿಬರಹದಲ್ಲಿ “”ಸಿಡಿಮದ್ದುಗಳ ಸುಶ್ರಾವ್ಯತೆಯಲ್ಲಿ ಯುದ್ಧ ಆರಂಭವಾದ ಬೆನ್ನಲ್ಲೇ ನಾವು ಸೇಡು ತೀರಿಸಿಕೊಳ್ಳಲು ಸನ್ನದ್ಧರಾಗುತ್ತೇವೆ” ಎಂದು ಹೇಳಿರುವುದಾಗಿ “ಸ್ಟಾರ್’ ಪತ್ರಿಕೆ ವರದಿ ಮಾಡಿದೆ. ಅಡಿಬರಹ ಅರೇಬಿಕ್ ಭಾಷೆಯ ಗುಪ್ತ ಸಂಕೇತಗಳಲ್ಲಿ ದ್ದಿದ್ದನ್ನು ತಜ್ಞರು ಪತ್ತೆ ಹಚ್ಚಿ ಭಾಷಾಂತರ ಗೊಳಿಸಿದ್ದಾರೆಂದು ಸ್ಟಾರ್ ಹೇಳಿದೆ. ಜತೆಗೆ, ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಜಾರ್ಜ್ ಕಲಿಯುತ್ತಿರುವ ಶಾಲೆಗೆ ಬಿಗಿಭದ್ರತೆ ಏರ್ಪಡಿಸಲಾಗಿದೆ.