ಹೀಗೂ ಉಂಟೇ! ಸೈಕಲ್ ಡಿಕ್ಕಿ ಹೊಡೆದು ಕಾರಿನ ಮುಂಭಾಗವೇ ಜಖಂ
Team Udayavani, Jan 4, 2019, 12:49 PM IST
ಬೀಜಿಂಗ್: ಈ ವೈರಲ್ ಚಿತ್ರವನ್ನು ಕಂಡ ಪ್ರತಿಯೊಬ್ಬರು ಅಚ್ಚರಿಯಿಂದ ಕೇಳುತ್ತಿದ್ದ ಪ್ರಶ್ನೆ ಒಂದೇ..ಅಬ್ಬಾ ಅದೆಂತಹ ಸೈಕಲ್ ಅನ್ನು ತಯಾರಿಸಿಬಿಟ್ಟಿದ್ದಾರೆ ಎಂದು! ಯಾಕೆಂದರೆ ಕಾರು ಮತ್ತು ಸೈಕಲ್ ನಡುವೆ ನಡೆದ ಡಿಕ್ಕಿಯಲ್ಲಿ ಕಾರಿನ ಮುಂಭಾಗವೇ ಗುದ್ದಿ ಹೋಗಿರುವುದು!
ಹೌದು ಕಾರು ಮತ್ತು ಸೈಕಲ್ ಹೊಡೆದರೆ ಸೈಕಲ್ ಪುಡಿ, ಪುಡಿಯಾಗೋದು ಸಾಮಾನ್ಯ ಸಂಗತಿ. ಆದರೆ ಸೈಕಲ್ ಡಿಕ್ಕಿ ಹೊಡೆದು ಕಾರಿನ ಮುಂಭಾಗದ ಬಂಪರ್ ನಜ್ಜುಗುಜ್ಜಾಗಿದ್ದರೆ, ಸೈಕಲ್ ಗೆ ಯಾವುದೇ ಹಾನಿಯಾಗದಿರುವ ಚಿತ್ರ ಚೀನಾದ ಸಾಮಾಜಿಕ ಜಾಲತಾಣ, ವೆಬ್ ಸೈಟ್ ನಲ್ಲಿ ಭಾರೀ ವೈರಲ್ ಆಗಿಬಿಟ್ಟಿದೆ.
ಈ ಚಿತ್ರ ವೈರಲ್ ಆದ ಬಳಿಕ ಫೇಸ್ ಬುಕ್ ನಲ್ಲಿ ಜೋಕ್ಸ್ ಹರಿದಾಡತೊಡಗಿದೆ..ಓಹ್ ಇದೀಗ ನೋಕಿಯಾ ಬೈಕ್ಸ್ ಅನ್ನು ತಯಾರಿಸುತ್ತದೆಯೇ? ಎಂಬುದಾಗಿ..ನನಗೆ ಈ ಬೈಕ್ ಬೇಕು ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಬಹುತೇಕರು ಇದು ನಕಲಿ ಚಿತ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ಸ್ಥಳೀಯ ಪೊಲೀಸರು ಘಟನೆ ನಡೆದ ಸ್ಥಳದ ವಿಡಿಯೋ ರಿಲೀಸ್ ಮಾಡುವ ಮೂಲಕ ನಿಜವಾದ ಘಟನೆ ಎಂದು ಸ್ಪಷ್ಟಪಡಿಸಿದ್ದಾರಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬುದ್ಧನ ಮಾರ್ಗ ಅನುಸರಿಸುವ ಅವಶ್ಯಕತೆಯಿದೆ : ಜಪಾನ್ ನಲ್ಲಿ ಪ್ರಧಾನಿ ಮೋದಿ
ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ
ಪಾಕಿಸ್ತಾನ: ಇಂಧನ ಉಳಿಸಲು ಕೆಲಸದ ದಿನಕ್ಕೆ ಕತ್ತರಿ!
ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್ಗೆ ಜೀವಾವಧಿ ಶಿಕ್ಷೆ
ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ