ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ಗೆ ವಾರ್ನಿಂಗ್ ಕೊಟ್ಟ ಎಲಾನ್ ಮಸ್ಕ್
Team Udayavani, Jul 16, 2022, 6:50 AM IST
ವಾಷಿಂಗ್ಟನ್: ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸುವುದಾಗಿ ಹೇಳಿ ನಂತರ ಆ ಒಪ್ಪಂದವನ್ನು ಮುರಿದುಕೊಂಡ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ರೀತಿ ಒಪ್ಪಂದ ಮುರಿದುಕೊಳ್ಳುವುದಕ್ಕೂ ಮೊದಲು ಮಸ್ಕ್, ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ಗೆ ವಾರ್ನಿಂಗ್ ಒಂದನ್ನು ಕೊಟ್ಟಿದ್ದ ವಿಚಾರ ಇದೀಗ ಹೊರಬಿದ್ದಿದೆ.
“ನಿಮ್ಮ ಸಂಸ್ಥೆಯ ವಕೀಲರು ನನ್ನ ಆರ್ಥಿಕ ವ್ಯವಹಾರಗಳ ಬಗ್ಗೆ ತಲೆ ಹಾಕಿ, ಸಮಸ್ಯೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಇದು ಈಗಲೇ ನಿಲ್ಲಬೇಕು’ ಎಂದು ಮಸ್ಕ್ ಅವರು ಪರಾಗ್ ಮತ್ತು ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಅವರಿಗೆ ಜೂ.28ರಂದೇ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ಈ ವಿಚಾರವಾಗಿ ಟ್ವಿಟರ್ ದೂರನ್ನು ದಾಖಲಿಸಿದೆ ಕೂಡ.
ಮಲಮಗಳ ಜತೆ ಮಗು!
ಎಲಾನ್ ಮಸ್ಕ್ ತಂದೆ ಎರೋಲ್ ಮಸ್ಕ್ ತಾವು ತಮ್ಮ ಮಲಮಗಳಾದ ಜಾನಾ ಬೆಝುಯಿಡೆನ್ಹೌಟ್ ಜತೆಗೆ ಎರಡನೇ ಮಗುವಿಗೆ ತಂದೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಮತ್ತು ಅವರ ಮಲಮಗಳು ಜಾನಾ ಬೆಝುಯಿಡೆನ್ಹೌಟ್ಗೆ ಈಗಾಗಲೇ 5 ವರ್ಷದ ಮಗನಿದ್ದಾನೆ. 2019ರಲ್ಲಿ ಮತ್ತೂಂದು ಮಗು ಹುಟ್ಟಿದ್ದಾಗಿ ಎರೋಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಈಗ ವೈರಲ್ ಆಗಿದೆ. 1979ರಲ್ಲಿ ಜಾನಾ ಅವರ ತಾಯಿ ಹೈಡೆ ಅವರನ್ನು ವಿವಾಹವಾಗಿದ್ದ ಎರೋಲ್ಗೆ, ಹೈಡೆ ಜೊತೆಗೂ ಇಬ್ಬರು ಮಕ್ಕಳಿದ್ದಾರೆ.