ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಪ್ರಸಾರಕ್ಕೆ ತಡೆ
Team Udayavani, Nov 6, 2022, 6:40 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕೊಲೆ ಯತ್ನ ವಿಫಲಗೊಂಡ ಬೆನ್ನಲ್ಲೇ ಅವರು ಪ್ರಚಾರ ಪಡೆಯದಂತೆ ತಡೆಯಲು ಅಲ್ಲಿನ ಸರಕಾರ ಹರಸಾಹಸ ಆರಂಭಿಸಿದೆ.
ಇಮ್ರಾನ್ ಖಾನ್ ಅವರ ಭಾಷಣಗಳು ಮತ್ತು ಪತ್ರಿಕಾಗೋಷ್ಠಿಗಳನ್ನು ಪ್ರಸಾರ ಮಾಡದಂತೆ ಎಲ್ಲ ಟಿವಿ ಚಾನೆಲ್ಗಳಿಗೆ ಪಾಕಿಸ್ಥಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಶನಿವಾರ ಕಟ್ಟಪ್ಪಣೆ ನೀಡಿದೆ.
ಅಷ್ಟೇ ಅಲ್ಲ, ಅವರ ಭಾಷಣಗಳ ಮರುಪ್ರಸಾರಕ್ಕೆ ಪ್ರಾಧಿಕಾರ ತಡೆ ತಂದಿದೆ. ಇದೇ ವೇಳೆ ಗುರುವಾರದ ಮೆರವಣಿಗೆ ವೇಳೆ ದಾಳಿಕೋರ ಗುಂಡು ಹಾರಿಸುತ್ತಿದ್ದಂತೆ, ಆತನನ್ನು ಹಿಡಿದು ಗುರಿ ತಪ್ಪುವಂತೆ ಮಾಡಿದ ಯುವಕನನ್ನು ಇಮ್ರಾನ್ ಖಾನ್ “ನೀನು ಪಾಕಿಸ್ಥಾನದ ಹೀರೋ’ ಎಂದು ಹೊಗಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್ ಖಾನ್ ಶನಿವಾರ ಆ ಯುವಕ ಇಬಿ¤ಸಾಮ್ನನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ