ಪುತ‹ನಿಗಾಗಿ “ಲ್ಯಾಂಬೋರ್ಗಿನಿ’ ಕಾರನ್ನೇ ತಯಾರಿಸಿದ ತಂದೆ!
ಕಾರು ಸೃಷ್ಟಿಸಿ ಮಗನ ಆಸೆ ಈಡೇರಿಸಿದ ಅಪ್ಪ
Team Udayavani, Oct 26, 2019, 4:03 AM IST
ಕೊಲರಾಡೊ (ಅಮೆರಿಕ): ಇಲ್ಲಿನ ಕೆಎಂಎಲ್ ಲ್ಯಾಬೊರೇಟರಿಯಲ್ಲಿ ಪ್ರಧಾನ ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸ್ಟೆರ್ಲಿಂಗ್ ಬ್ಯಾಕಸ್ ಎಂಬವರು ತಮ್ಮ ಮಗ ಆಸೆ ಪಟ್ಟ ಅಂತ ಐಶಾರಾಮಿ ಲ್ಯಾಂಬೋರ್ಗಿನಿ ಕಾರನ್ನೇ ಉಡುಗೊರೆಯಾಗಿ ನೀಡಿದ್ದಾರೆ!
ಹಾಗಂತ ಅವರೇನೂ ಹೊಸ ಕಾರನ್ನು ಖರೀದಿ ಮಾಡಿಲ್ಲ. ಅದಕ್ಕೆ ಬದಲು, ತಾವೇ ಲ್ಯಾಂಬೋರ್ಗಿನಿ ಆ್ಯವೆಂಟೇಟರ್ ಕಾರನ್ನು ಮರುಸೃಷ್ಟಿ ಮಾಡಿದ್ದಾರೆ. ಅಂದರೆ ಪೇಟೆಯಿಂದ ಪ್ರತ್ಯೇಕವಾಗಿ ಇಂಜಿನ್, ಚಾಸಿಸ್, ಕಾರಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತಂದು ಅದನ್ನು ನೈಜ ಲ್ಯಾಂಬೋರ್ಗಿನಿಯಂತೆ ರೂಪಿಸಿದ್ದಾರೆ. ಬರೀ ನೋಡುವುದಕ್ಕಲ್ಲ ಇದರಲ್ಲಿ ಕುಳಿತು ಸವಾರಿಯನ್ನೂ ಮಾಡಬಹುದಾಗಿದೆ. ಇದಕ್ಕೆ 300ಕ್ಕಿಂತ ಹೆಚ್ಚು ಹಾರ್ಸ್ಪವರ್ ನೀಡುವ “ಕಾರ್ವೆಟ್ಸ್ ಎಲ್ಎಸ್1 ವಿ 8′ ಇಂಜಿನ್ ಅಳವಡಿಸಲಾಗಿದೆ. ಇದರ ಮತ್ತೂಂದು ವಿಶೇಷವೆಂದರೆ, ಪುತ್ರನ ಆಸೆಯಂತೆ ಈ ಕಾರಿನ ಮೇಲೆ ತ್ರೀ-ಡಿ ಸ್ಟಿಕರಿಂಗ್ ಮಾಡಿಸಿದ್ದಾರೆ ಕೂಡ. ಈಗ ಹೇಳಿ, ಇಂಥ ತಂದೆಯಿದ್ದರೆ 5 ಕೋಟಿ ರೂ.ಗಳ ಲ್ಯಾಂಬೋರ್ಗಿನಿ ಏಕೆ ಬೇಕು ಅಲ್ಲವೇ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ