ತೈಲೋತ್ಪನ್ನಗಳ ದರ ಏರಿಕೆ : ಪಾಕ್ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 233 ರೂ. !
Team Udayavani, Jun 17, 2022, 7:10 AM IST
ಇಸ್ಲಾಮಾಬಾದ್ : ಪಾಕಿಸ್ಥಾನ ಸರಕಾರ ತೈಲೋತ್ಪನ್ನಗಳ ಬೆಲೆಯನ್ನು ಶೇ. 29ರ ವರೆಗೆ ಹೆಚ್ಚಿಸಿ ಆದೇಶ ನೀಡಿದೆ. ಜತೆಗೆ ಸಹಾಯಧನ ಸೌಲಭ್ಯವನ್ನೂ ರದ್ದು ಮಾಡಲು ನಿರ್ಧರಿಸಿದೆ.
ಇಂಥ ಕ್ರಮದ ಮೂಲಕ ವಿತ್ತೀಯ ಕೊರತೆಯನ್ನು ನೀಗಿಸಲು ಕ್ರಮ ಕೈಗೊಂಡಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲದ ನೆರವು ಪಡೆಯಲೂ ಪಾಕಿಸ್ಥಾನಕ್ಕೆ ಅನುಕೂಲವಾಗಲಿದೆ. ಬೆಲೆ ಏರಿಕೆ ಬಳಿಕ ಪ್ರತೀ ಲೀಟರ್ ಪೆಟ್ರೋಲ್ಗೆ 233.89 ರೂ., ಪ್ರತೀ ಲೀಟರ್ ಹೈಸ್ಪೀಡ್ ಡೀಸೆಲ್ಗೆ 233.89 ರೂ., ಪ್ರತೀ ಲೀಟರ್ ಸೀಮೆ ಎಣ್ಣೆಗೆ 211. 47 ರೂ. ಆಗಲಿದೆ.
20 ದಿನಗಳ ಅವಧಿಯಲ್ಲಿ ಶೆಹಬಾಜ್ ಷರೀಫ್ ನೇತೃತ್ವದ ಸರಕಾರ ಮೂರನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡುತ್ತಿದೆ. ಆ ದೇಶದ ಬಿಕ್ಕಟ್ಟು ಎಷ್ಟು ಹದಗೆಟ್ಟಿದೆ ಎಂದರೆ ಬೊಕ್ಕಸಕ್ಕೆ ಉಂಟಾಗುತ್ತಿರುವ ವಿತ್ತೀಯ ಹೊರೆ ತಪ್ಪಿಸಲು ದಿನಕ್ಕೆ 2 ಕಪ್ ಟೀ ಕುಡಿಯುವುದನ್ನು ನಿಲ್ಲಿಸಬೇಕು ಎಂದು ಅಲ್ಲಿನ ಸರಕಾರ ಬುಧವಾರವಷ್ಟೇ ಮನವಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ