ಚೀನ “ಹೈ-ಸ್ಪೀಡ್’ ರೈಲು
Team Udayavani, Nov 24, 2018, 2:18 PM IST
ಬೀಜಿಂಗ್: ಜಗತ್ತಿನ ಒಟ್ಟು ಹೈ ಸ್ಪೀಡ್ ರೈಲು ಜಾಲದ ಶೇ.16ರಷ್ಟು ಜಾಲವನ್ನು ತನ್ನಲ್ಲೇ ಹೊಂದಿರುವ ಹೆಗ್ಗಳಿಕೆ ಹೊಂದಿರುವ ಚೀನ, ತನ್ನ ಪೂರ್ವ ಭಾಗದ ನಿಂಗ್ಬೋ ನಗರದಿಂದ ಝೌಶಾನ್ ಎಂಬ ದ್ವೀಪ ನಗರಕ್ಕೆ ಸಮುದ್ರದ ಅಡಿಯಲ್ಲಿ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಮುಂದಾಗಿದೆ.
ಒಟ್ಟು 70.82 ಕಿ.ಮೀ. ದೂರದವರೆಗೆ ಈ ಮಾರ್ಗ ನಿರ್ಮಾಣವಾಗಲಿದ್ದು, ಸಾಗರದಡಿಯ ಮಾರ್ಗ 16.2 ಕಿ.ಮೀ. ನಷ್ಟಿರಲಿದೆ. ಇಲ್ಲಿ ರೈಲುಗಳು ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಓಡಲಿವೆ. ಸದ್ಯಕ್ಕೆ ಈ ಎರಡೂ ನಗರಗಳ ನಡುವಿನ ಪ್ರಯಾಣಾವಧಿ 90 ನಿಮಿಷಗಳಷ್ಟಿದ್ದು, ಹೊಸ ರೈಲು ಮಾರ್ಗದಿಂದಾಗಿ ಈ ಅವಧಿ 30 ನಿಮಿಷಕ್ಕಿಳಿಯಲಿದೆ.