ಭೂಕಂಪ: ದ್ವೀಪಗಳ ಮಿಲನ?
Team Udayavani, Nov 25, 2018, 6:00 AM IST
ವೆಲ್ಲಿಂಗ್ಟನ್: ಎರಡು ದ್ವೀಪಗಳ ರಾಷ್ಟ್ರವಾದ ನ್ಯೂಜಿಲೆಂಡ್ನಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭೂಕಂಪವು ಆ ದ್ವೀಪಗಳನ್ನು ಪರಸ್ಪರ ಹತ್ತಿರಕ್ಕೆ ಸರಿಯುವಂತೆ ಮಾಡಿದೆ. ಜತೆಗೆ, ಉತ್ತರ ದ್ವೀಪದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ನೆಲ್ಸನ್ ನಗರ ನಿಧಾನವಾಗಿ ಸಾಗರದಲ್ಲಿ ಮುಳುಗಲಾರಂಭಿಸಿದೆ ಎಂದು ನ್ಯೂಜಿಲೆಂಡ್ ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ.
2016ರ ನ. 14ರಂದು ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವೆ ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ, ಎರಡೂ ದ್ವೀಪಗಳ ಸಮಾನಾಂತರ ರೇಖೆಗಳಲ್ಲಿ ಕನಿಷ್ಠ 25 ರೇಖೆಗಳು ಏರುಪೇರಾಗಿದ್ದು, ಇವುಗಳ ಅಯಸ್ಕಾಂತೀಯ ಶಕ್ತಿ ದಕ್ಷಿಣ ದ್ವೀಪವನ್ನು ಉತ್ತರ ದ್ವೀಪದ ಕಡೆಗೆ ದಬ್ಬುತ್ತಿದೆ ಎನ್ನಲಾಗಿದೆ. ಅಂದಹಾಗೆ, ಈ ದ್ವೀಪಗಳ ಸೇರುವಿಕೆ ಸದ್ಯದಲ್ಲೇ ನಡೆಯುವ ವಿದ್ಯಮಾನವೇನಲ್ಲ. ಇದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಕಳೆದೆರಡು ವರ್ಷಗಳಲ್ಲಿ ಉತ್ತರ ಮತ್ತು ದಕ್ಷಿಣ ದ್ವೀಪಗಳು ಕೇವಲ 35 ಸೆಂ.ಮೀ. ಮಾತ್ರ ಸರಿದಿದ್ದು, ಇವುಗಳ ನಡುವಿನ ಅಂತರ ಇನ್ನೂ 50 ಕಿ.ಮೀ. ಇದೆಯಾದ್ದರಿಂದ ಇವುಗಳ ಮಿಲನ ಸದ್ಯಕ್ಕೆ ನಡೆಯುವುದಿಲ್ಲ. ಹಾಗೆಯೇ, ನೆಲ್ಸನ್ ನಗರವೂ ಕಳೆದ ಎರಡು ವರ್ಷಗಳಲ್ಲಿ 20 ಮಿ.ಮೀ.ನಷ್ಟು ಮಾತ್ರ ಮುಳುಗಡೆಯಾಗಿದ್ದು, ಇದೂ ಸಹ ಬೇಗನೇ ಮುಳುಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ