ಹಿಂದೂಗಳು ನಮ್ಮ ಶತ್ರುಗಳು: ಪಾಕ್ ಶಾಸಕ
Team Udayavani, Mar 21, 2019, 12:30 AM IST
ಪೇಶಾವರ: ಹಿಂದೂಗಳು ನಮ್ಮ ಶತ್ರುಗಳು ಎಂದು ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮುಖಂಡ ಶೇರ್ ಆಜಮ್ ವಾಜಿರ್ ಎಂದು ಟೀಕಿಸಿದ್ದಾರೆ. ಪುಲ್ವಾಮಾ ಘಟನೆಯ ಬಳಿಕ ಭಾರತ-ಪಾಕಿಸ್ಥಾನ ಬಾಂಧವ್ಯ ಹದಗೆಟ್ಟಿರುವ ಬಳಿಕದ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಪ್ರಾಂತೀಯ ಅಸೆಂಬ್ಲಿಯ ಸದನದಲ್ಲಿ ಬುಧವಾರ ಮಾತನಾಡಿದ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಖೈಬರ್ ಪಖು¤ಂಖ್ವಾ ಪ್ರಾಂತ್ಯವನ್ನು ಪ್ರತಿನಿಧಿಸುವ ರವಿಕುಮಾರ್, ರಂಜಿತ್ ಸಿಂಗ್ ಖಂಡಿಸಿದ್ದಾರೆ ಮತ್ತು ಸದನದಿಂದ ಹೊರನಡೆದಿದ್ದಾರೆ. ಬಳಿಕ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ ವಾಜಿರ್, “ಹಿಂದುಸ್ತಾನ ನಮ್ಮ ಶತ್ರು ರಾಷ್ಟ್ರ. ಬಾಯಿ ತಪ್ಪಿ ಹಿಂದೂಗಳು ಎಂದು ಹೇಳಿದೆ’ ಎಂದು ಕ್ಷಮೆ ಯಾಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ