ಹಾಂಕಾಂಗ್: ಪ್ರತಿಭಟನೆಯ ಮಧ್ಯೆಯೇ ಕ್ಸಿ ಏಕತೆ ಮಂತ್ರ
Team Udayavani, Oct 2, 2019, 4:11 AM IST
ಹಾಂಕಾಂಗ್ನಲ್ಲಿ ಮಂಗಳವಾರವೂ ಪ್ರತಿಭಟನೆಕಾರರು ಮತ್ತು ಭದ್ರತಾ ಸಿಬಂದಿ ನಡುವೆ ಘರ್ಷಣೆ ನಡೆಯಿತು.
ಬೀಜಿಂಗ್: ಹಾಂಕಾಂಗ್ನಲ್ಲಿ ಸ್ವಾಯತ್ತೆಗಾಗಿ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಮಧ್ಯೆಯೇ, ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಏಕತೆಯ ಮಂತ್ರ ಪಠಿಸಿದ್ದಾರೆ. ಅಲ್ಲದೆ ಒಂದು ದೇಶ, ಎರಡು ವ್ಯವಸ್ಥೆ ಎಂಬ ಸಿದ್ಧಾಂತಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. 1997ರಲ್ಲಿ ಬ್ರಿಟನ್ನಿಂದ ಚೀನಗೆ ಹಾಂಕಾಂಗ್ ಹಸ್ತಾಂತರ ಮಾಡುವಾಗ ಇದೇ ಸಿದ್ಧಾಂತವನ್ನು ಅನುಸರಿಸಲಾಗಿತ್ತು.
ಚೀನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹಾಂಕಾಂಗ್ನಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಸಂಭ್ರಮಾಚರಣೆಗೂ ಮುನ್ನ ಮಾತ ನಾಡಿದ ಕ್ಸಿ, ಚೀನದ ಬೆಂಬಲದೊಂದಿಗೆ ಹಾಂಕಾಂಗ್ ಮತ್ತು ಮಕಾವು ಪ್ರಗತಿ ಕಾಣಲಿದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ಏಕತೆಯೇ ಸುಸ್ಥಿರ. ಏಕತೆಯೇ ಸಾಮರ್ಥ್ಯದ ಮೂಲ ಎಂದಿದ್ದಾರೆ. ತೈವಾನ್ನ ಮರು ಸೇರ್ಪಡೆ ಕುರಿತೂ ಕ್ಸಿ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ