ಟ್ರಂಪ್ ಭಾಷಣದ ಪ್ರತಿ ಹರಿದ ಸ್ಪೀಕರ್ ನ್ಯಾನ್ಸಿ
Team Udayavani, Feb 5, 2020, 10:24 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣದ ಪ್ರತಿಯನ್ನು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹರಿದುಹಾಕಿದ್ದಾರೆ.
ಈ ಮೂಲಕ ಟ್ರಂಪ್ ಮತ್ತು ನ್ಯಾನ್ಸಿ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಬುಧವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಟ್ರಂಪ್, ಅದರ ಪ್ರತಿಯೊಂದನ್ನು ಪದ್ಧತಿಯಂತೆ ನ್ಯಾನ್ಸಿ ಅವರಿಗೆ ನೀಡಿದರು.
ನ್ಯಾನ್ಸಿ ಅವರು ಟ್ರಂಪ್ಗೆ ಹಸ್ತಲಾಘವ ಮಾಡಲು ಮುಂದಾದಾಗ, ಟ್ರಂಪ್ ಕ್ಯಾರೇ ಎನ್ನದೆ ಮುಖವನ್ನು ತಿರುಗಿಸಿ ನಡೆದರು. ಇದರಿಂದ ಕ್ರುದ್ಧರಾದ ನ್ಯಾನ್ಸಿ ಸಭೆಯಲ್ಲೇ ಟ್ರಂಪ್ ಭಾಷಣದ ಪ್ರತಿಯನ್ನು ಎಲ್ಲರೆದುರು ಹರಿದುಹಾಕಿದರು.
ಟ್ರಂಪ್ ಅಧ್ಯಕ್ಷ ಗಾದಿ ಏರಿದ ಬಳಿಕ ಅವರ ವಿರುದ್ಧ ಎಲ್ಲರಿಗೂ ಮೊದಲು ಆರೋಪ ಮಾಡಿದ್ದು ಇದೇ ನ್ಯಾನ್ಸಿ. ಅಲ್ಲಿಂದ ಇಬ್ಬರ ನಡುವೆ ಮುನಿಸು ಆರಂಭವಾಗಿತ್ತು. ಇತ್ತೀಚೆಗೆ ಟ್ರಂಪ್ ಕೂಡ “ಕ್ರೇಜಿ ನ್ಯಾನ್ಸಿ’ ಎಂದು ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ