“ನನಗೆ ಬೇರೆ ಆಯ್ಕೆಯೇ ಇರಲಿಲ್ಲ’: ರಿಷಿ ಸುನಾಕ್
Team Udayavani, Jul 30, 2022, 6:25 AM IST
ಲಂಡನ್: ಕೆಲವು ವಿಚಾರಗಳ ಬಗ್ಗೆ ಬ್ರಿಟನ್ನ ಈ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ತಮ್ಮ ನಡುವೆ ಭಿನ್ನಾಭಿ ಪ್ರಾಯಗಳು ಇದ್ದಿದ್ದರಿಂದಲೇ ತಾವು ಹಣ ಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಆ ಸಂದರ್ಭದಲ್ಲಿ ಅದು ಬಿಟ್ಟರೆ ಬೇರೆ ಆಯ್ಕೆ ನನ್ನ ಮುಂದಿರಲಿಲ್ಲ ಎಂದು ಬ್ರಿಟನ್ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆಯ ಅಂತಿಮ ಸುತ್ತು ತಲುಪಿರುವ ರಿಷಿ ಸುನಾಕ್ ಹೇಳಿದ್ದಾರೆ.
ಅಂತಿಮ ಸುತ್ತಿನಲ್ಲಿರುವ ರಿಷಿ ಮತ್ತು ಲಿಜ್ ಟ್ರಸ್ ಇಬ್ಬರೂ ಒಂದೇ ವೇದಿಕೆಯಲ್ಲಿ ತಮ್ಮ ಪಕ್ಷದ ಸಂಸ ದರ ಜತೆಗೆ ಸಂವಾದ ನಡೆಸಿದ್ದು, ಅದರಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ರಿಷಿ ಮೇಲಿನಂತೆ ಉತ್ತರಿಸಿದ್ದಾರೆ.