ಭಾರತ-ಪಾಕ್ NSAಗಳ ಗುಪ್ತ ಮಾತುಕತೆ?
Team Udayavani, Jan 2, 2018, 10:20 AM IST
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ರಹಸ್ಯವಾಗಿ ಭೇಟಿಯಾಗಿದ್ದರು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿಯಾಗಲೀ, ಅನಧಿಕೃತವಾಗಿಯಾಗಲೀ ಉಭಯ ದೇಶಗಳು ಯಾವುದೇ ಹೇಳಿಕೆ ನೀಡಿಲ್ಲ. ಇವರ ಭೇಟಿ ಕೇವಲ ಸ್ನೇಹಯುತ ಮತ್ತು ಧನಾತ್ಮಕ ದೃಷ್ಟಿಕೋನದ್ದಾಗಿತ್ತು. ಪಾಕಿಸ್ಥಾನದ ಎನ್ಎಸ್ಎ ನಾಸರ್ ಖಾನ್ ಜುನೇಜಾ ಹಾಗೂ ಭಾರತದ ಎನ್ಎಸ್ಎ ಅಜಿತ್ ದೋವಲ್ ಭೇಟಿ ಮಾಡಿದ್ದರು ಎಂದು ಪಾಕಿಸ್ಥಾನದ ಪತ್ರಿಕೆ ಡಾನ್ ವರದಿ ಮಾಡಿದೆ. ಈ ಹಿಂದೆ 2015ರ ಡಿಸೆಂಬರ್ನಲ್ಲೂ ಉಭಯ ದೇಶಗಳ ಎನ್ಎಸ್ಎಗಳು ಬ್ಯಾಂಕಾಕ್ನಲ್ಲಿ ಭೇಟಿಯಾಗಿದ್ದರು. ಈ ವಿಷಯದ ಬಗ್ಗೆ ಈವರೆಗೂ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ. ಪಾಕಿಸ್ಥಾನದಲ್ಲಿ ಜಾಧವ್ರನ್ನು ಅವರ ಪತ್ನಿ ಹಾಗೂ ತಾಯಿ ಭೇಟಿ ಮಾಡಿದ ಎರಡು ದಿನಗಳ ಬಳಿಕ ಈ ಸಭೆ ನಡೆದಿದೆ ಎನ್ನಲಾಗಿದೆ.
ಸಯೀದ್ ಆಸ್ತಿ ಜಪ್ತಿ?: ಪಾಕ್ನಲ್ಲಿ ಸ್ವಂತ ಪಕ್ಷ ಸ್ಥಾಪಿ ಸಲು ಮುಂದಾಗಿರುವ ಜೆಯುಡಿ ಉಗ್ರ ಹಫೀಜ್ ಸಯೀದ್ನ ಸಂಘಟನೆ ಹಾಗೂ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಲು ಪಾಕಿಸ್ಥಾನ ಸರಕಾರ ಚಿಂತನೆ ನಡೆಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಕೆಲವು ಅಧಿಕಾರಿಗಳೇ ಈ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ