ಮಕ್ಕಳ ಅಪಹರಣ, ಹಲ್ಲೆ : ಅಮೆರಿಕದಲ್ಲಿ ದ್ರವ್ಯ ವ್ಯಸನಿ ಭಾರತೀಯ ಸೆರೆ
Team Udayavani, Apr 30, 2019, 11:50 AM IST
ನ್ಯೂಯಾರ್ಕ್ : ಇಲ್ಲಿನ ಮೆಡಿಕಲ್ ಸೆಂಟರ್ ಎದುರು ಹಿರಿಯ ಅಮೆರಿಕನ್ ಮಹಿಳೆಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಕಾರನ್ನು ಚಲಾಯಿಸಿಕೊಂಡು ಹೋದ 24 ವರ್ಷದ ಭಾರತೀಯನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಮಕ್ಕಳ ಅಪಹರಣ, ಹಲ್ಲೆ ಮತ್ತು ಕಳವಿನ ಕೇಸನ್ನು ದಾಖಲಿಸಿದ್ದಾರೆ.
ಆರೋಪಿ ಭಾರತೀಯನನ್ನು ದಲ್ವೀರ್ ಸಿಂಗ್ ಎಂದು ಗುರುತಿಸಲಾಗಿದ್ದು ಆತನು ಹೆರಾಯಿನ್ ಮಾದಕ ದ್ರವ್ಯ ವ್ಯಸನಿ ಎಂದು ಗೊತ್ತಾಗಿದೆ.
ಆರೋಪಿ ದಲ್ವೀರ್, ಕಾರಿನಲ್ಲಿದ್ದ 69 ವರ್ಷದ ಮಹಿಳೆ ನಿಟಾ ಕೊಬರ್ನ್ ಅವರನ್ನು ಬಲವಂತದಿಂದ ಹೊರಗೆಳೆದ. ಆತನಿಗೆ ಪ್ರತಿರೋಧ ಒಡ್ಡಿದ ಆಕೆ ಗಾಯಗೊಂಡಳು. ಆಷ್ಟಾಗುವಾಗ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹೊರ ಜಿಗಿದು ಪಾರಾದಾರು. ಆದರೂ ಆರೋಪಿ ಕಾರನ್ನು ಚಲಾಯಿಸಿಕೊಂಡು ಹೋದ; ಬಳಿಕ ಆತನನ್ನು ಬೆನ್ನಟ್ಟಿ ಬಂಧಿಸಲಾಯಿತು ಎಂದು ಮಿಡ್ಲ್ ಟೌನ್ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ