ದುಬೈ : ಸಮುದ್ರದಲ್ಲಿ ಮೀನು ಹಿಡಿಯಲು ಹೋದ ಭಾರತೀಯ ಮುಳುಗಿ ಸಾವು
Team Udayavani, May 2, 2019, 12:06 PM IST
ದುಬೈ : ಇಲ್ಲಿನ ಕಡಲ ತೀರದ ಕೊರಕಲಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯುತ್ತಿದ್ದ ಭಾರತೀಯ ವ್ಯಕ್ತಿಯೋರ್ವ ಜಾರಿ ಸಮುದ್ರಕ್ಕೆ ಬಿದ್ದು ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂ ನ ಸಹಾದ್ ಅಬ್ದುಲ್ ಸಲಾಮ್ ಎಂದು ಗುರುತಿಸಲಾಗಿದೆ. ಆತ ತನ್ನ ಗೆಳೆಯರ ಜತೆಗೆ ಜದ್ದಾಫ್ ಜಿಲ್ಲೆಯ ಸಮುದ್ರ ತೀರಕ್ಕೆ ಹೋಗಿದ್ದ. ಆಗ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಮೃತ ಸಹಾದ್ ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸುದ್ದಿ ತಿಳಿದೊಡನೆಯೇ ಪೋರ್ಟ್ ಪೊಲೀಸ್ ಠಾಣೆಯ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬಂದರು. ಕೋಸ್ಟ್ ಗಾರ್ಡ್ನ ಮುಳುಗು ತಜ್ಞರು ಶವವನ್ನು ಮೇಲಕ್ಕೆತ್ತಿದರು.