ಲಂಡನ್‌ : ನಿದ್ದೆಗಣ್ಣಲ್ಲಿ ಕಾರ್‌ ಡ್ರೈವ್‌ ಮಾಡಿ ಅಪಘಾತ: ಭಾರತೀಯ ಮಹಿಳೆಗೆ ಜೈಲು

Team Udayavani, Jun 15, 2019, 5:47 PM IST

ಲಂಡನ್‌ : ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಅದರ ಚಾಲಕನ ಸಾವಿಗೆ ಕಾರಣಳಾದ ಭಾರತೀಯ ಮೂಲದ ಮಹಿಳೆಗೆ ಎರಡೂವರೆ ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

41 ವರ್ಷದ ಅನುಷಾ ರಂಗನಾಥನ್‌ ಟೆಕ್‌ ಪರಿಣತೆ. ವೃತ್ತಿ ನಿಮಿತ್ತ ಆಕೆ ಕೆಲವು ದಿನಗಳಿಂದ ನಿದ್ದೆಯೇ ಮಾಡಿರಲಿಲ್ಲ; ಮೇಲಾಗಿ ವಿಪರೀತ ಆಯಾಸಕ್ಕೆ ಗುರಿಯಾಗಿದ್ದಳು. ಆ ಸ್ಥಿತಿಯಲ್ಲಿ ಆಕೆ ತನ್ನ ಮಗುವನ್ನು ಕಾರಿನಲ್ಲಿರಿಸಿಕೊಂಡು ನಿದ್ದೆಗಣ್ಣಲ್ಲೇ ಡ್ರೈವ್‌ ಮಾಡುತ್ತಿದ್ದಳು.

ಆಗ್ನೇಯ ಇಂಗ್ಲಂಡ್‌ನ‌ ಆಕ್ಸ್‌ಫ‌ರ್ಡ್‌ಶಯರ್‌ ನಲ್ಲಿ ಆಕೆಯ ಕಾರು ಇನ್ನೊಂದು ಕಾರಿಗೆ ಗುದ್ದಿ ಅದರ ಚಾಲಕ 70ರ ಹರೆಯದ ಪ್ಯಾಟ್ರಿಶಿಯಾ ರಾಬಿನ್‌ಸನ್‌ ಅವರ ಸಾವಿಗೆ ಕಾರಣಳಾಗಿದ್ದಳು. ಈ ಘಟನೆ ಕಳೆದ ವರ್ಷ ಜುಲೈ ನಲ್ಲಿ ನಡೆದಿತ್ತು.

ತನ್ನ ಅಪರಾಧವನ್ನು ಒಪ್ಪಿಕೊಂಡ ಅನುಷಾಗೆ ಆಕ್ಸ್‌ಫ‌ರ್ಡ್‌ ಕ್ರೌನ್‌ ಕೋರ್ಟ್‌ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ