ಪಾಕ್ ಹಣದುಬ್ಬರ ಏಷ್ಯಾದಲ್ಲೇ ಅಧಿಕ
Team Udayavani, May 3, 2023, 6:30 AM IST
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ಥಾನದ ಪಾಡು ನೆರೆಯ ಶ್ರೀಲಂಕಾವನ್ನೂ ಮೀರಿಸುವ ಹಂತ ತಲುಪಿದೆ.
ರೂಪಾಯಿ ಮೌಲ್ಯ ಕುಸಿತದೊಂದಿಗೆ ಏಷ್ಯಾದಲ್ಲೇ ಅತೀ ವೇಗದ ಹಣದುಬ್ಬರ ದಾಖಲಿಸುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಪಾಕಿಸ್ಥಾನದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಗ್ರಾಹಕ ಬೆಲೆಗಳು ಏಪ್ರಿಲ್ನಲ್ಲಿ ಶೇ.36.4ರಷ್ಟು ಏರಿಕೆ ಕಂಡಿವೆ ಇದು 1964ರಿಂದ ಈ ವರೆಗಿನ ಅತಿಹೆಚ್ಚು ಏರಿಕೆಯಾಗಿದೆ.
ಇದೇ ಮಾದರಿಯ ಬಿಕ್ಕಟ್ಟಿಗೆ ತುತ್ತಾಗಿರುವ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಏಪ್ರಿಲ್ನಲ್ಲಿ ಗ್ರಾಹಕ ಬೆಲೆ ಶೇ.35.3 ಆಗಿದೆ. ಪಾಕಿಸ್ಥಾನದಲ್ಲಿ ಸಾರಿಗೆ ಶುಲ್ಕಗಳು ಶೇ.56.8, ಆಹಾರ ಹಣದುಬ್ಬರ ಪ್ರಮಾಣ ಶೇ.48.1, ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆ ಶೇ.21.6 ಹಾಗೂ ವಸತಿ, ನೀರು, ವಿದ್ಯುತ್ ಬೆಲೆ ಶೇ.16.19 ಈಗಾಗಲೇ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ