ಟಾಲ್ಕಮ್ ಆಧಾರಿತ ಪೌಡರ್ ಮಾರಾಟ ಸ್ಥಗಿತಕ್ಕೆ ಜೆ ಆ್ಯಂಡ್ ಜೆ ನಿರ್ಧಾರ
ಜೋಳದ ಪಿಷ್ಟದಿಂದ ಪೌಡರ್ ತಯಾರಿಸಲು ಸಜ್ಜು
Team Udayavani, Aug 13, 2022, 7:30 AM IST
ವಾಷಿಂಗ್ಟನ್: ಪ್ರಸಿದ್ಧ ಜಾನ್ಸನ್ಸ್ ಆ್ಯಂಡ್ ಜಾನ್ಸನ್ಸ್ ಸಂಸ್ಥೆಯು ಮುಂದಿನ ವರ್ಷದಿಂದ ಟಾಲ್ಕ್ ಆಧಾರಿತ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಚಿಂತನೆಯಲ್ಲಿರುವುದಾಗಿ ಹೇಳಿಕೊಂಡಿದೆ. ಟಾಲ್ಕ್ ಆಧಾರಿತ ಉತ್ಪನ್ನಗಳ ಬಗ್ಗೆ ದೂರುಗಳು ಹೆಚ್ಚಾದ ಬೆನ್ನಲ್ಲೇ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.
ಜಾನ್ಸನ್ಸ್ ಆ್ಯಂಡ್ ಜಾನ್ಸನ್ಸ್ ಸಂಸ್ಥೆಯ ಮಕ್ಕಳ ಟಾಲ್ಕಮ್ ಪೌಡರ್ನಲ್ಲಿರುವ ಅಸ್ಬೆಸ್ಟೋಸ್ ಅಂಶವು ಕ್ಯಾನ್ಸರ್ ತರಿಸಬಲ್ಲಂತದ್ದು ಎಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ದೂರುಗಳು ದಾಖಲಾಗಿವೆ. ಒಟ್ಟು 38 ಸಾವಿರಕ್ಕೂ ಅಧಿಕ ದೂರುಗಳು ಸಂಸ್ಥೆಯ ವಿರುದ್ಧವಿದೆ. ಇದೇ ಹಿನ್ನೆಲೆ ಸಂಸ್ಥೆ ಹಲವು ಬಾರಿ ಕೋಟ್ಯಂತರ ರೂ. ದಂಡವನ್ನೂ ತೆತ್ತಿದೆ. ಈಗಾಗಲೇ ಅಮೆರಿಕ ಮತ್ತು ಕೆನಡಾ ರಾಷ್ಟ್ರಗಳಲ್ಲಿ ಸಂಸ್ಥೆಯ ಉತ್ಪನ್ನಗಳ ಮಾರಾಟಕ್ಕೆ ನಿಷೇಧವನ್ನೂ ಹೇರಲಾಗಿದೆ.
ಹಾಗಿದ್ದರೂ ಸಂಸ್ಥೆಯು ಈ ದೂರುಗಳನ್ನು ತಳ್ಳಿ ಹಾಕಿದೆ. ತಮ್ಮ ಉತ್ಪನ್ನಗಳಲ್ಲಿ ಅಸ್ಬೆಸ್ಟೋಸ್ ಅಂಶವಿಲ್ಲ ಎಂದು ಹೇಳಿಕೊಂಡಿರುವ ಸಂಸ್ಥೆಯು, ಗುರುವಾರವೂ ಅದನ್ನೇ ಪುನರುತ್ಛರಿಸಿದೆ. ಟಾಲ್ಕ್ ಬದಲಾಗಿ ಜೋಳದ ಪಿಷ್ಟ ಬಳಸಿ ಮಕ್ಕಳ ಪೌಡರ್ ತಯಾರಿಸಿ, ಮಾರಾಟ ಮಾಡುವುದಾಗಿ ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ