ಕಪೂರ್ ಮನೆ ಮ್ಯೂಸಿಯಂ
Team Udayavani, Nov 30, 2018, 11:47 AM IST
ಇಸ್ಲಾಮಾಬಾದ್ : ಪಾಕಿಸ್ಥಾನದ ಪೇಶಾವರದ ಖೀಸ್ಸಾ ಖ್ವಾನಿ ಬಜಾರ್ನಲ್ಲಿರುವ ಬಾಲಿವುಡ್ ನಟ ರಿಶಿ ಕಪೂರ್ ಅವರ ಪೂರ್ವಿಕರ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲು ಪಾಕಿಸ್ಥಾನ ಸರಕಾರ ನಿರ್ಧರಿಸಿದೆ.
ತಮ್ಮ ಪೂರ್ವಿಕರ ನಿವಾಸವನ್ನು ಸಂಗ್ರಹಾಲಯ ಅಥವಾ ಯಾವುದಾರೂ ಸಂಸ್ಥೆಯಾಗಿ ಬದಲಿಸಬೇಕೆಂದು ರಿಶಿ ಕಪೂರ್ ಸರಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಸರಕಾರ, ವಸ್ತು ಸಂಗ್ರಹಾಲಯ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹೂ¾ದ್ ಖುರೇಶಿ ತಿಳಿಸಿದ್ದಾರೆ. ಈ ನಿವಾಸವನ್ನು ಬಾಲಿವುಡ್ನ ದಂತಕತೆ ಪೃಥ್ವಿರಾಜ್ ಕಪೂರ್ರ ತಂದೆ ಬಾಶೇಶ್ವರ್ನಾಥ್ ನಿರ್ಮಿಸಿದ್ದು. ಪೃಥ್ವಿರಾಜ್ ಕಪೂರ್ ಮತ್ತು ಅವರ ಮಗ, ಹೆಸರಾಂತ ನಟ ರಾಜ್ ಕಪೂರ್ ಅದೇ ಮನೆಯಲ್ಲಿ ಜನಿಸಿದ್ದು.