World’s Oldest Man: ಪ್ರಪಂಚದ ದೀರ್ಘಾಯುಷಿ ವ್ಯಕ್ತಿ ಅಬಾದ್ಗೆ 123 ವರ್ಷ?
Team Udayavani, Apr 10, 2024, 10:52 PM IST
ಲಿಮಾ(ಪೆರು): ಪ್ರಪಂಚದ ಅತಿ ದೀರ್ಘಾಯುಷಿ ವ್ಯಕ್ತಿ ಎಂಬ ಹೆಗ್ಗಳಿಕೆಯು ಪೆರು ದೇಶದ ಮರ್ಸೆಲಿನೋ ಅಬಾದ್ರ ಪಾಲಾಗುವ ಸಾಧ್ಯತೆಗಳಿವೆ. ಪೆರು ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ತಮ್ಮ ದೇಶದ ನಿವಾಸಿ ಅಬಾದ್ಗೆ ಬರೋಬ್ಬರಿ 123 ವರ್ಷಗಳು ತುಂಬಿದ್ದು, ಕಳೆದ ವಾರವಷ್ಟೇ 124ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಅಲ್ಲದೆ, ಅಬಾದ್ರನ್ನು ಗಿನ್ನೆಸ್ ದಾಖಲೆಗೆ ಸೇರಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಮೂಲತಃ ಪೆರುವಿನ ಆ್ಯಂಡೀಸ್ ಪರ್ವತ ಶ್ರೇಣಿಯ ಛಗ್ಲದವರಾದ ಅಬಾದ್, ವೈವಿಧ್ಯಮಯ ಹಣ್ಣುಗಳು ಹಾಗೂ ಕುರಿ ಮರಿಯ ಮಾಂಸವೇ ತಮ್ಮ ದೀರ್ಘಾಯಸ್ಸಿನ ಹಿಂದಿನ ರಹಸ್ಯವೆಂದು ಹೇಳಿಕೊಂಡಿದ್ದಾರೆ. ಸದ್ಯ ಜೀವಂತ ದೀರ್ಘಾಯುಷಿ ದಾಖಲೆ ಬ್ರಿಟನ್ನಿನ ಬ್ರಿಟ್ ಜಾನ್ ಹೆಸರಿನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ