ವಲಸೆ ಬಂದಿದ್ದ ಟ್ರಂಪ್ ಮಾವನಿಗೆ ಪೌರತ್ವ
Team Udayavani, Aug 11, 2018, 7:34 AM IST
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪತ್ನಿ ಮೆಲಾನಿಯಾ ಟ್ರಂಪ್ ತಂದೆ ಹಾಗೂ ತಾಯಿಗೆ ಚೈನ್ ಮೈಗ್ರೇಶನ್ ಪ್ರೋಗ್ರಾಮ್ ಮೂಲಕ ಅಮೆರಿಕದ ಪೌರತ್ವ ಲಭ್ಯವಾಗಿದೆ. ಆದರೆ ಈ ಚೈನ್ ಮೈಗ್ರೇಶನ್ ವ್ಯವಸ್ಥೆಯನ್ನು ಟ್ರಂಪ್ ಹಿಂದಿನಿಂದಲೂ ವಿರೋಧಿಸುತ್ತಿದ್ದರು. ಮೆಲಾನಿಯಾ ಪಾಲಕರಾದ ವಿಕ್ಟರ್ ಮತ್ತು ಅಮಲ್ಜಿಯಾ ನಾವ್ಸ್ ಸ್ಲೊವೇನಿಯಾ ಮೂಲದವರಾಗಿದ್ದು, ಗ್ರೀನ್ ಕಾರ್ಡ್ ಪಡೆದು ಅಮೆರಿಕದಲ್ಲಿ ವಾಸಿಸುತ್ತಿದ್ದರು.
ಮೆಲಾನಿಯಾ 2001ರಲ್ಲಿ ಮಾಡೆಲಿಂಗ್ಗಾಗಿ ವೀಸಾ ಪಡೆದು ಅಮೆರಿಕಕ್ಕೆ ಆಗಮಿಸಿದ್ದರು. 2006 ರಲ್ಲಿ ಅಮೆರಿಕ ಪೌರತ್ವವನ್ನು ಪಡೆದರು. ಮೆಲಾನಿ ಯಾರಿಂದ ಪ್ರಾಯೋಜಿತರಾಗಿ ವಿಕ್ಟರ್ ಹಾಗೂ ಅಮಲ್ಜಿಯಾ ಕೂಡ ಗ್ರೀನ್ ಕಾರ್ಡ್ ಪಡೆದಿದ್ದರು. ಗ್ರೀನ್ ಕಾರ್ಡ್ ಪಡೆದ ನಂತರ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವ್ಯವಸ್ಥೆಯನ್ನು ಅಮೆರಿಕದಲ್ಲಿ ಚೈನ್ ಮೈಗ್ರೇಶನ್ ಎಂದು ಕರೆಯಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ