ನೆದರ್ಲ್ಯಾಂಡ್ ಶೂಟೌಟ್ಗೆ ಮೂರು ಸಾವು
Team Udayavani, Mar 19, 2019, 12:30 AM IST
ದಿ ಹೇಗ್: ನ್ಯೂಜಿಲೆಂಡ್ನಲ್ಲಿ 7 ಮಂದಿ ಭಾರತೀಯರು ಸೇರಿದಂತೆ 50 ಮಂದಿ ಗುಂಡಿನ ದಾಳಿಯಲ್ಲಿ ಅಸುನೀಗಿದ ಘಟನೆ ಬೆನ್ನಲ್ಲೇ ನೆದರ್ಲ್ಯಾಂಡ್ನ ಉಟ್ರೇಚ್ನಲ್ಲಿ ಶೂಟೌಟ್ ನಡೆದಿದೆ. ಈ ಘಟನೆಯಲ್ಲಿ ಮೂವರು ಅಸುನೀಗಿ, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ನಗರದ ಮೇಯರ್ ಮತ್ತು ಪೊಲೀಸರ ಪ್ರಕಾರ ಇದೊಂದು ಉಗ್ರ ಕೃತ್ಯವೇ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಶಸ್ತ್ರದೊಂದಿಗೆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.