ಗಿನ್ನೆಸ್ಗಾಗಿ 85 ಭಾಷೆಗಳಲ್ಲಿ ಎನ್ಆರ್ಐ ಬಾಲಕಿ ಹಾಡು
Team Udayavani, Nov 13, 2017, 6:50 AM IST
ದುಬೈ: ಒಂದೇ ಕಾರ್ಯಕ್ರಮದಲ್ಲಿ 85 ಭಾಷೆಗಳಲ್ಲಿ ಹಾಡಿ ಗಿನ್ನಿಸ್ ದಾಖಲೆ ಮಾಡಲು ಭಾರತೀಯ ಮೂಲದ ದುಬೈ ಬಾಲಕಿ ಪ್ರಯತ್ನ ನಡೆಸಿದ್ದಾಳೆ. ಈಗಾಗಲೇ ಈಕೆ 80 ಭಾಷೆಗಳ ಹಾಡುಗಳನ್ನು ಕಲಿತಿದ್ದು, ಇನ್ನು ಐದು ಭಾಷೆಯ ಹಾಡುಗಳನ್ನು ಕಲಿತು ದಾಖಲೆ ನಿರ್ಮಿಸುವ ಚಿಂತನೆ ನಡೆಸಿದ್ದಾಳೆ. 12 ವರ್ಷದ ಬಾಲಕಿ ಸುಚೇತಾ ಸತೀಶ್ ಕೇರಳ ಮೂಲದವಳಾಗಿದ್ದು, ದುಬೈನಲ್ಲಿ ದಿ ಇಂಡಿಯನ್ ಹೈಸ್ಕೂಲ್ನಲ್ಲಿ ಏಳನೇ ತರಗತಿ ಓದುತ್ತಿದ್ದಾಳೆ. ಡಿಸೆಂಬರ್ 29ಕ್ಕೆ ಈಕೆಯ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತೀಯ ಭಾಷೆಗಳಾದ ಹಿಂದಿ, ಮಲಯಾಳಂ ಮತ್ತು ತಮಿಳು ಹಾಡುಗಳನ್ನು ಕಲಿತಿದ್ದಾಳೆ. ತಂದೆಯ ಸ್ನೇಹಿತೆ ಮನೆಗೆ ಬಂದಾಗ ಜಪಾನೀ ಹಾಡು ಹಾಡಿದ್ದರು. ಇದನ್ನು ಕೇಳಿ ನಾನೂ ಹಾಡಲು ಪ್ರಯತ್ನಿಸಿದೆ. ಅಲ್ಲಿಂದ ನನಗೆ ಬೇರೆ ಬೇರೆ ಭಾಷೆಗಳ ಹಾಡುಗಳನ್ನು ಕಲಿಯುವ ಉತ್ಸಾಹ ಮೂಡಿತು. ಸಾಮಾನ್ಯವಾಗಿ ಒಂದು ಹಾಡನ್ನು ನಾನು ಎರಡು ಗಂಟೆಯಲ್ಲಿ ಕಲಿಯುತ್ತೇನೆ ಎಂದಿದ್ದಾಳೆ. 2008ರಲ್ಲಿ ಆಂಧ್ರಪ್ರದೇಶದ ಕೇಶಿರಾಜು ಶ್ರೀನಿವಾಸ 76 ಭಾಷೆಯ ಹಾಡುಗಳನ್ನು ಹಾಡಿ ದಾಖಲೆ ಮಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ