Operation ಕೆಂಪು ಸಮುದ್ರ: ಹತ್ತು ಹೌತಿ ಉಗ್ರರು ಫಿನಿಶ್
ನೌಕೆಯ ಮೇಲೆ ದಾಳಿ ನಡೆಸಿದ್ದ ಬಂಡುಕೋರರು
Team Udayavani, Jan 2, 2024, 12:18 AM IST
Photo courtesy: Reuters
ದುಬಾೖ/ಕೈರೋ: ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ನೌಕೆಯ ಮೇಲೆ ದಾಳಿ ನಡೆಸಿದ ಹೌತಿ ಬಂಡುಕೋರರನ್ನು ಹಿಮ್ಮೆಟ್ಟಿಸಲು ಭಾನುವಾರ ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಉಗ್ರರು ಹತರಾಗಿದ್ದು ದೃಢಪಟ್ಟಿದೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಿಂಗಾಪುರಕ್ಕೆ ಸೇರಿದ ಮರ್ಸ್ಕ್ ಹ್ಯಾಂಗ್ಜೌ ನೌಕೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ ನೌಕಾಪಡೆಯು ಉಗ್ರರು ಇದ್ದ ಮೂರು ಬೋಟ್ಗಳ ಮೇಲೆ ರಕ್ಷಣಾತ್ಮಕ ದಾಳಿ ನಡೆಸಿತ್ತು. ಇದರಿಂದಾಗಿ ಹತ್ತು ಮಂದಿ ಉಗ್ರರು ಮೃತಪಟ್ಟಿದ್ದಾರೆ. ದಾಳಿಗೆ ಒಳಗಾದ ಸಿಂಗಾಪುರದ ನೌಕೆಯಿಂದ ಸಹಾಯಕ್ಕಾಗಿ ತುರ್ತು ಕರೆ ಬಂದಿದ್ದನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ದೃಢಪಡಿಸಿದೆ.
ಕೂಡಲೇ ರಕ್ಷಣ ಕಾರ್ಯಾಚರಣೆಗೆ ಇಳಿದ ಅಮೆರಿಕದ ನೌಕಾಪಡೆ ಹೌತಿ ಬಂಡುಕೋರರು ಇದ್ದ ನಾಲ್ಕು ಸಣ್ಣ ದೋಣಿಗಳ ಮೇಲೆ ದಾಳಿ ನಡೆಸಿದೆ. ಕೆಲ ಹೊತ್ತು ಬಿರುಸಿನ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಹತ್ತು ಮಂದಿ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಜತೆಗೆ ಅವರು ಬಂದಿದ್ದ ಮೂರು ಸಣ್ಣ ನೌಕೆಗಳು ಮುಳುಗಿವೆ. ಈ ಅಂಶವನ್ನು ಉಗ್ರ ಸಂಘಟನೆಯೂ ಕೂಡ ಖಚಿತಪಡಿಸಿದೆ.
ಈ ಕಾರ್ಯಾಚರಣೆಯಲ್ಲಿ ಸಿಂಗಾಪುರದ ಕಂಪೆನಿಯ ಹಡಗಿನಲ್ಲಿದ್ದ ನೌಕೆಯ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ಅಪಾಯ ಉಂಟಾಗಿಲ್ಲವೆಂದು ಅಮೆರಿಕದ ನೌಕಾಪಡೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ