ಎಲ್ಲರಿಗೂ ಎಚ್ಐವಿ?

Team Udayavani, May 18, 2019, 6:00 AM IST

ರಟೊ ಡೆರೊ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಲರ್ಕಾನಾ ಎಂಬ ಜಿಲ್ಲೆಯ ರಟೊ ಡೆರೊ ಎಂಬ ತಾಲೂಕಿನ ವಸಾಯೋ ಎಂಬ ಹಳ್ಳಿಯಲ್ಲಿ ವೈದ್ಯರೊಬ್ಬರ ನಿರ್ಲಕ್ಷ್ಯದಿಂದಾಗಿ ಈ ಹಳ್ಳಿಯ ಮಕ್ಕಳೂ ಸೇರಿದಂತೆ ಸುಮಾರು 400 ಜನರಿಗೆ ಎಚ್ಐವಿ ಸೋಂಕು ತಗುಲಿರುವ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಬಳಿಗೆ ಚಿಕಿತ್ಸೆಗಾಗಿ ಬಂದಿದ್ದ ಪ್ರತಿಯೊಬ್ಬ ವ್ಯಕ್ತಿಗೂ ಈ ಹಳ್ಳಿಯ ವೈದ್ಯನೊಬ್ಬ ಒಂದೇ ಸಿರಿಂಜ್‌ ಬಳಸಿದ್ದರಿಂದಾಗಿ ಈ ಸೋಂಕು ತಗುಲಿದೆ. ಸರ್ಕಾರ, ತಾತ್ಕಾಲಿಕ ಎಚ್ಐವಿ ಪರೀಕ್ಷಾ ಕೇಂದ್ರ ಗಳನ್ನು ತೆರೆದಿದ್ದು ನೂರಾರು ಜನ ಪರೀಕ್ಷೆಗೊಳಗಾಗುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ