PM ಕುರ್ಚಿಯಲ್ಲಿ ಕುಳಿತ ಪಾಕ್ನ ಅತ್ಯಂತ ಕಿರಿಯ ಬ್ಲಾಗರ್!
Team Udayavani, Mar 30, 2024, 6:04 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಅತ್ಯಂತ ಕಿರಿಯ ಬ್ಲಾಗರ್ ಮೊಹಮ್ಮದ್ ಶಿರಾಜ್ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ಭೇಟಿಯಾಗಿದ್ದು, ಪ್ರಧಾನಿ ಕುರ್ಚಿಯಲ್ಲೇ ಕುಳಿತ ಈತನ ವೀಡಿಯೋ ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇಸ್ಲಾಮಾಬಾದ್ನಲ್ಲಿರುವ ಪ್ರಧಾನಿ ಶೆಹಬಾಜ್ ಅವರ ನಿವಾಸಕ್ಕೆ ಶಿರಾಜ್ ತನ್ನ ಸಹೋದರಿಯೊಂದಿಗೆ ಭೇಟಿ ನೀಡಿದ್ದಾನೆ. ಪಿಎಂ ಶೆಹಬಾಜ್ ಅವರ ಜತೆಗೆ ಮಾತುಕತೆ ನಡೆಸಿದ್ದಾನೆ. ಈ ವೀಡಿಯೋವನ್ನು ಶಿರಾಜ್ ತನ್ನ ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ.