ಕೇನ್ಸ್ ಚಲನಚಿತ್ರೋತ್ಸವ’ದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ ಬಾಲಿವುಡ್ ನಟ ಆರ್.ಮಾಧವನ್
Team Udayavani, May 20, 2022, 9:23 PM IST
ಕೇನ್ಸ್: ಅಂತಾರಾಷ್ಟ್ರೀಯ ಸಿನಿ ಉತ್ಸವವಾಗಿರುವ “ಕೇನ್ಸ್ ಚಲನಚಿತ್ರೋತ್ಸವ’ದಲ್ಲಿ ಬಾಲಿವುಡ್ ನಟ ಆರ್.ಮಾಧವನ್, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.
“ಮೋದಿಯವರ ಆಡಳಿತ ಆರಂಭವಾದಾಗ ಅವರು ಮೈಕ್ರೋ ಆರ್ಥಿಕತೆ ಮತ್ತು ಡಿಜಿಟಲ್ ಕರೆನ್ಸಿ ಪರಿಚಯಿಸಿದರು. ಆದರೆ ನಮ್ಮಲ್ಲಿನ ಹೆಚ್ಚು ಪಾಲು ರೈತರು ಅನಕ್ಷರಸ್ಥರಾಗಿರುವುದರಿಂದಾಗಿ ಈ ಯೋಜನೆಗಳನ್ನು ಜನರು ದೊಡ್ಡ ದುರಂತ ಎಂದು ಕರೆದಿದ್ದರು. ಆದರೆ ಈಗ ಎಲ್ಲವೂ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ.
ಓದಲು ಬಾರದಿದ್ದರೂ, ಖಾತೆಗೆ ಹಣ ಬಂದಿದೆ ಎಂದು ಬರುವ ಸಂದೇಶವನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಪ್ರಧಾನಿಯವರಿಂದ ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಹಾಕಿ ಬೆದರಿಕೆ, ವ್ಯಕ್ತಿಯಿಂದ ದೂರು