ರಾಣಿ ಅಂತ್ಯಸಂಸ್ಕಾರದ ರಿಹರ್ಸಲ್
Team Udayavani, Jul 2, 2018, 12:14 PM IST
ಲಂಡನ್: ಯಾವ ವ್ಯಕ್ತಿಯೇ ಆಗಲಿ, ಅಸುನೀಗಿದ ಬಳಿಕವೇ ಅವರ ಅಂತ್ಯಸಂಸ್ಕಾರದ ಬಗ್ಗೆ, ವಿಧಿವಿಧಾನಗಳ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ, ಬ್ರಿಟನ್ನಲ್ಲಿ ಸಾಯುವ ಮುನ್ನವೇ ಈ ಎಲ್ಲ ವಿಚಾರಗಳ ಕುರಿತು ನಿರ್ಧರಿಸಿ, ಅದರ ಪೂರ್ವಾಭ್ಯಾಸ (ರಿಹರ್ಸಲ್)ವನ್ನೂ ನಡೆಸಲಾಗಿದೆ. ಇಷ್ಟಕ್ಕೂ ಯಾರ ಸಾವಿನ ಬಗ್ಗೆಹೇಳುತ್ತಿದ್ದೀರಿ ಎಂದು ಕೇಳುತ್ತೀರಾ?
ಬ್ರಿಟನ್ನ ರಾಣಿ 2ನೇ ಎಲಿಜಬೆತ್(92) ಅವರ ಸಾವಿನ ಬಗ್ಗೆ. ಹೌದು, ಅವರು ಅಸುನೀಗಿದರೆ ಯಾವ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಬೇಕು, 10 ದಿನಗಳ ಕಾಲ ಶೋಕಾಚರಣೆ ಹೇಗಿರಬೇಕು ಎಂಬೆಲ್ಲದರ ಬಗ್ಗೆ ಇತ್ತೀಚೆಗೆ ರಹಸ್ಯವಾಗಿ ಪ್ರಾತ್ಯಕ್ಷಿಕೆ ನಡೆದಿದೆಯಂತೆ. ಲಂಡನ್ ಸೇತುವೆ ಸಮೀಪದ ಸಂತ ಪೌಲ್ ಕ್ಯಾಥಡ್ರಲ್ನಲ್ಲಿ ಗುರುವಾರ ನಡೆಯಬೇಕಾಗಿದ್ದ ಕಾರ್ಯಕ್ರಮದಲ್ಲಿ ರಾಣಿ ಭಾಗವಹಿಸಬೇಕಾಗಿತ್ತು. ಆದರೆ, ಅವರು ಭಾಗವಹಿಸದೇ ಇರಲು ನಿರ್ಧರಿಸಿದ್ದು, ಅವರ ಆರೋಗ್ಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಆದರೆ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ ಎಂದು “ಸಂಡೇ ಟೈಮ್ಸ್’ ವರದಿ ಮಾಡಿದೆ. ಇದರ ನಡುವೆಯೇ, ಬ್ರಿಟನ್ನ ಸಚಿವರು, ಅಧಿಕಾರಿಗಳು ಈ ಪೂರ್ವಾಭ್ಯಾಸ ಸಭೆ ನಡೆಸಿದ್ದಾರೆ. ಇಲ್ಲಿ ರಾಣಿ ನಿಧನದ ನಂತರದ ಪ್ರತಿ ಕ್ರಮಗಳ ಬಗ್ಗೆಯೂ ಗಂಭೀರವಾಗಿ ಚರ್ಚಿಸಲಾಗಿದೆ. ಸಾಮಾನ್ಯವಾಗಿ ಅಧಿಕಾರಿಗಳು ಮಾತ್ರ ಇಂಥ ಸಭೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ