ಬಾಗ್ದಾದ್ ಅಮೇರಿಕ ರಾಯಭಾರಿ ಕಚೇರಿಯ ಬಳಿ ರಾಕೆಟ್ ದಾಳಿ!
Team Udayavani, Jan 5, 2020, 8:49 AM IST
ಬಾಗ್ದಾದ್: ಇಲ್ಲಿನ ಅಮೇರಿಕ ರಾಯಭಾರಿ ಕಚೇರಿಯಿರುವ ಗ್ರೀನ್ ಜೋನ್ ಮತ್ತು ಅಮೇರಿಕ ಸೇನಾಪಡೆಯಿರುವ ವಾಯುನೆಲೆಯ ಮೇಲೆ ಶನಿವಾರ ರಾತ್ರಿ ರಾಕೆಟ್ ದಾಳಿ ಮಾಡಲಾಗಿದೆ. ಇದರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇರಾಕ್ ಸೇನಾ ಮೂಲಗಳು ತಿಳಿಸಿವೆ.
ಬಾಗ್ದಾದ್ ನ ಸೆಲೆಬ್ರೇಶನ್ ಸ್ಕ್ವೇರ್ ಮತ್ತು ಜದ್ರಿಯಾ ಪ್ರದೇಶ, ಸಲಾಹುದ್ದೀನ್ ಪ್ರಾಂತ್ಯದ ಬಲಾದ್ ವಾಯುನೆಲೆಯ ಮೇಲೆ ಕೆಲವು ರಾಕೆಟ್ ಗಳು ಅಪ್ಪಳಿಸಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಂ ಸುಲೇಮನಿಯ ಮೇಲೆ ಅಮೇರಿಕಾ ರಾಕೆಟ್ ದಾಳಿ ನಡೆಸಿ ಹತ್ಯೆ ಮಾಡಿದ ನಂತರ ಈ ದಾಳಿ ನಡೆದಿದೆ. ಇದಾದ ನಂತರ ಶನಿವಾರ ಮುಂಜಾನೆ ಇರಾಕ್ ನ ಹಶೆದ್ ಅಲ್ ಶಾಬಿ ಅರೆ ಸೇನಾ ಪಡೆ ವಾಹನಗಳ ಮೇಲೆ ಅಮೇರಿಕಾ ದಾಳಿ ನಡೆಸಿತ್ತು.