ಸೌದಿಯ ಹೊಸ ಸಿಟಿಯಲ್ಲಿ ರಸ್ತೆಯೂ ಇರಲ್ಲ, ವಾಹನವೂ ಓಡಾಡಲ್ಲ!

Team Udayavani, Jan 12, 2021, 7:40 AM IST

ಸೌದಿಯ ಹೊಸ ಸಿಟಿಯಲ್ಲಿ ರಸ್ತೆಯೂ ಇರಲ್ಲ, ವಾಹನವೂ ಓಡಾಡಲ್ಲ!

ರಿಯಾದ್‌: ನಗರ ಅಥವಾ ಪಟ್ಟಣ ಎಂದರೆ ರಸ್ತೆಗಳು, ಕಾರುಗಳು, ಬಡಾವಣೆಗಳ ಚಿತ್ರಣ ಸಾಮಾನ್ಯ. ಆದರೆ ಸೌದಿ ಅರೇಬಿಯಾದಲ್ಲಿ ರಸ್ತೆಗಳೇ ಇಲ್ಲದ, ಕಾರುಗಳೇ ಕಾಣದ, ಇಂಗಾಲದ ಹೊರಸೂಸುವಿಕೆಗೆ ಅವಕಾಶವೇ ಇಲ್ಲದ ನಗರವೊಂದು ತಲೆ ಎತ್ತಲಿದೆ!

ಕೆಂಪು ಸಮುದ್ರದ ತಟದಲ್ಲಿ ನಿರ್ಮಾಣವಾಗಲಿರುವ ನಗರದ ಮಾಹಿತಿಯನ್ನು ಸೌದಿ ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಸೋಮವಾರ ನೀಡಿದ್ದಾರೆ. ಅವರ ಕನಸಿನ ಯೋಜನೆ ಇದಾಗಿದ್ದು, ಅದು ಹೇಗೆ ಜಾರಿಯಾಗಬೇಕು ಎಂಬ ಬಗ್ಗೆ ಅವರೇ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಂದ ಹಾಗೆ ಈ ಪ್ರಾಜೆಕ್ಟ್ಗೆ “ನಿಯಾಮ್‌’ (NಉOM) ಎಂಬ ಹೆಸರು ಇರಿಸಲಾಗಿದೆ. ಸೌದಿಯು ತೈಲ ಕ್ಷೇತ್ರ ಹೊರತು ಪಡಿಸಿದ ಉದ್ದಿಮೆಗಳತ್ತ ಹೊರಳಿಕೊಳ್ಳುತ್ತಿರುವುದಕ್ಕೆ ಪೂರಕ ವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.  ಯೋಜನೆ ಬಗ್ಗೆ ಮಾತನಾಡಿದ ಸಲ್ಮಾನ್‌, “ಸಾಂಪ್ರಾದಾಯಿಕ ನಗರ ಎಂಬ ಹಣೆಪಟ್ಟಿಯಿಂದ ಭಿನ್ನವಾಗಿ ನಾವು ಯೋಚಿಸಬೇಕಾಗಿದೆ. ಹೊಸ ನಗರದಲ್ಲಿ 10 ಲಕ್ಷ ಮಂದಿ ವಾಸಿಸಲಿದ್ದಾರೆ. ಅಲ್ಲಿ ಕಾರುಗಳು, ರಸ್ತೆಗಳು, ಇಂಗಾಲ ಹೊರಸೂಸುವಿಕೆಗೆ ಅವಕಾಶವೇ ಇಲ್ಲ. ನಗರ ಒಟ್ಟು 170 ಕಿ.ಮೀ. ವ್ಯಾಪ್ತಿಯಲ್ಲಿ ಇರಲಿದೆ. ಅದರಲ್ಲಿ ಶೇ.95ರಷ್ಟು ವ್ಯವಸ್ಥೆಗಳು ಪರಿಸರಕ್ಕೆ ಪೂರಕವಾಗಿರಲಿವೆ’ ಎಂದು ಹೇಳಿದ್ದಾರೆ. 2050ರ ಒಳಗಾಗಿ ಅಲ್ಲಿಗೆ ತೆರಳಬೇಕು. ಅದರ ನಿರ್ಮಾಣ ಕಾರ್ಯ ಪ್ರಸಕ್ತ ವರ್ಷದ ಮೊದಲ ತ್ತೈಮಾಸಿಕದಲ್ಲೇ ಶುರುವಾಗಲಿದೆ ಎಂದಿದ್ದಾರೆ.

ಕೆಂಪು ಸಮುದ್ರ ಎಲ್ಲಿದೆ?: ಏಷ್ಯಾ ಮತ್ತು ಆಫ್ರಿಕಾ ನಡುವಿನ ಪ್ರದೇಶದಲ್ಲಿದೆ. ಅದು ಹಿಂದೂಮಹಾಸಾಗರದ ಖಾರಿ ಪ್ರದೇಶ. ಬಾಬ್‌ ಅಲ್‌ ಮಂಡೆಬ್‌ ಮತ್ತು ಗಲ್ಫ್ ಆಫ್ ಈಡೆನ್‌ ಅನ್ನು ಸಂಪರ್ಕಿಸುತ್ತದೆ. ಅದು ಒಟ್ಟು 4,38,000 ಚಕಿಮೀ ವ್ಯಾಪ್ತಿಯನ್ನು ಹೊಂದಿದೆ. ಪೂರ್ವದಲ್ಲಿ ಸೌದಿ ಅರೇಬಿಯಾ, ಯೆಮನ್‌, ಪಶ್ಚಿಮ ಭಾಗದಲ್ಲಿ ಈಜಿಪ್ಟ್, ಸುಡಾನ್‌, ಇರಿಟೇರಿಯಾ, ಡಿಜಿಬೌತಿ ದೇಶಗಳಿವೆ. ಕಡಲ ಜೀವಿಗಳು ಮತ್ತು ಹವಳಗಳಿಗೆ ಅದು ಪ್ರಸಿದ್ಧ. 200 ನಮೂನೆಯ ಹವಳಗಳನ್ನು ಹೊಂದಿದೆ ಮತ್ತು ಜಗತ್ತಿನ 200 ಪ್ರಾಕೃತಿಕ ಸೂಕ್ಷ್ಮ ಪ್ರದೇಶಗಳಲ್ಲಿ ಇದೂ ಒಂದು.

10 ಲಕ್ಷ- ಹೊಸ ನಗರದಲ್ಲಿ ವಾಸಿಸುವ  ಜನರು

500 ಶತಕೋಟಿ ಡಾಲರ್‌- ಯೋಜನೆಯ   ಒಟ್ಟಾರೆ ವೆಚ್ಚ

200 ಶತಕೋಟಿ ಡಾಲರ್‌- ಮೂಲ ಸೌಕರ್ಯಕ್ಕೆ ತಗಲುವ ವೆಚ್ಚ

3,80,000 -ಯೋಜನೆ ಪೂರ್ಣಗೊಳ್ಳುವವೇಳೆ ಸೃಷ್ಟಿಯಾಗುವ ಉದ್ಯೋಗ

5.86 ಶತಕೋಟಿ ಡಾಲರ್‌- ಏರಿಕೆಯಾಗಲಿರುವ ಜಿಡಿಪಿ

2022- ಮೊದಲ ಹಂತದ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.