ಮದುವೆ ನಿಶ್ಚಯವಾಗಿದ್ದ ಪಾಕ್‌ ಜೋಡಿ ಸೆಲ್ಫಿ: ಅಪ್ಪನಿಂದ ಅವಳಿ ಹತ್ಯೆ


Team Udayavani, Dec 4, 2018, 11:11 AM IST

crime-scene-700.jpg

ಇಸ್ಲಾಮಾಬಾದ್‌ : ನಿಶ್ಚಿತಾರ್ಥ ನಡೆದಿದ್ದರೂ ಮದುವೆಗೆ ಮುನ್ನ ಪರಸ್ಪರ ಭೇಟಿಯಾಗಿ ಸೆಲ್ಫಿ ತೆಗೆದುಕೊಂಡ ಕಾರಣಕ್ಕೆ 19 ವರ್ಷ ಪ್ರಾಯದ ತರುಣಿಯನ್ನು ಆಕೆಯ ತಂದೆ ವಿಷವಿಕ್ಕಿ ಸಾಯಿಸಿ ಮದುವೆಯಾಗಲಿದ್ದ ಹುಡುಗನನ್ನು ಗುಂಡಿಕ್ಕಿ ಕೊಂದ “ಮರ್ಯಾದೆಗೇಡು ಹತ್ಯೆ’ ಪ್ರಕರಣ ಪಾಕಿಸ್ಥಾನದ ಕರಾಚಿಯಿಂದ ವರದಿಯಾಗಿದೆ.

ನಿಶ್ಚಿತಾರ್ಥವಾದ ತನ್ನ ಪುತ್ರಿ ಮದುವೆಯಾಗಲಿರುವ ಹುಡುಗನನ್ನು ಮದುವೆಗೆ ಮುನ್ನ ಭೇಟಿಯಾಗುತ್ತಿರುವುದು ಮತ್ತು ಸೆಲ್ಫಿ ತೆಗೆದುಕೊಂಡಿರುವುದನ್ನು ಅರಿತ ತಂದೆ ಆಕೆಗೆ ವಿಷ ಉಣಿಸಿ ಕೊಂದು ಬಹುತೇಕ ಅದೇ ಹೊತ್ತಿನಲ್ಲಿ,  ಆಕೆಯನ್ನು ವರಿಸುವ ಹುಡುಗನನ್ನು ಕೂಡ ಗುಂಡಿಕ್ಕಿ ಕೊಂದನೆಂದು ಡಾನ್‌ ದೈನಿಕ ವರದಿ ಮಾಡಿದೆ. 

ಹುಡುಗಿಯ ತಾಯಿಯು ತನ್ನ ಮಗಳು ಮತ್ತು ಆಕೆಯನ್ನು ವರಿಸುವ ಹುಡುಗನನ್ನು ತನ್ನ ಪತಿಯೇ ಹತ್ಯೆಗೈದಿರುವುದನ್ನು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಳು. 

ಆ ದೂರಿನಲ್ಲಿ ಆಕೆ ತನ್ನ ಸಹೋದರಿ ಮತ್ತು ಆಕೆಯ ಪುತ್ರ (ತನ್ನ ಮಗಳನ್ನು ವರಿಸಲಿದ್ದ ಹುಡುಗ) ತನ್ನ ಮಗಳೊಂದಿಗಿನ ನಿಶ್ಚಿತಾರ್ಥದ ಬಳಿಕ ಒಂದು ಬಾರಿ ತನ್ನ ಮನೆಗೆ ಬಂದಿದ್ದಾಗ ಭಾವೀ ವಧು-ವರ ಪರಸ್ಪರ ಮಾತನಾಡಿಕೊಂಡು ಸೆಲ್ಫಿ ತೆಗೆದುಕೊಂಡಿದ್ದರು ಎಂದು ಹೇಳಿದ್ದಳು.

ಪೊಲೀಸರು ಈ ಅವಳಿ ಕೊಲೆಯ ಬಗ್ಗೆ ತನಿಖೆ ನಡೆಸಿದಾಗ ಹುಡುಗಿಯ ತಂದೆ ಮತ್ತು ಅಜ್ಜ ಕೂಡಿಕೊಂಡು ‘ಮನೆ ಮರ್ಯಾದೆ ಉಳಿಸುವ ಕಾರಣಕ್ಕೆ’ ಈ ಅವಳಿ ಹತ್ಯೆ ನಡೆಸಿದರೆಂಬುದು ಬಯಲಾಯಿತು. ಅಂತೆಯೇ ಪೊಲೀಸರು ಹುಡುಗಿಯ ತಂದೆ ಮತ್ತು ಅಜ್ಜನನ್ನು ಬಂಧಿಸಿದರು. 

ವಿಷಯ ಪೊಲೀಸರಲ್ಲಿಗೆ ಹೋಗುವ ಮುನ್ನ ಹುಡುಗಿಯ ತಂದೆಯು ತನ್ನ ಮಗಳು ವಿಷ ಸೇವಿಸಿ ಸತ್ತಿರುವುದಾಗಿ ಎಲ್ಲರಲ್ಲಿ ಹೇಳಿದ್ದ. ಅಂತೆಯೇ ಆಕೆಯ ಶವದ ಮರಣೋತ್ತರ ಪರೀಕ್ಷೆ ಇತ್ಯಾದಿ ಯಾವುದನ್ನೂ ನಡೆಸದೆ ತರಾತುರಿಯಲ್ಲಿ ಶವ ದಫ‌ನ ಮಾಡಿಸಿದ್ದ.

ಪೊಲೀಸರು ಇದೀಗ ಹುಡುಗಿಯ ಶವವನ್ನು ಸಮಾಧಿಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇತ್ತ ಮಗಳನ್ನು ವಿಷ ಉಣಿಸಿ ಕೊಂದ ಬಳಿಕ ಆಕೆಯ ಅಪ್ಪನು ಬಹುತೇಕ ಅದೇ ಹೊತ್ತಿನಲ್ಲಿ ಆಕೆಯನ್ನು ವರಿಸಲಿದ್ದ ಹುಡುಗನನ್ನು ಕೂಡ ಗುಂಡಿಕ್ಕಿ ಸಾಯಿಸಿರುವುದು ತನಿಖೆಯಿಂದ ಬಹಿರಂಗವಾಯಿತು. 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.