2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್

Team Udayavani, Dec 15, 2019, 10:14 AM IST

ಲಂಡನ್: ಈ ವರ್ಷದ ವಿಶ್ವ ಸುಂದರಿ ಅಂತಿಮ ಸುತ್ತು ಶನಿವಾರ ರಾತ್ರಿ ನಡೆದಿದ್ದು ಅಂತಿಮ ಪ್ರಶಸ್ತಿ ಪ್ರಕಟವಾಗಿದೆ. ಜಮೈಕಾದ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾರತದಿಂದ ಪ್ರತಿನಿಧಿಸಿದ್ದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್ ಆಗಿ ಮೂಡಿಬಂದರು. ಇದೇ ವೇಳೆ ಫ್ರಾನ್ಸ್ ನ ಒಫೇಲಿ ಮೆಝಿನೋ ಪ್ರಥಮ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವಿಶ್ವ ಸುಂದರಿ ಪಟ್ಟಕ್ಕೇರಿದ ಜಮೈಕಾದ ಟೋನಿ ಆನ್ ಸಿಂಗ್ ಅವರಿಗೆ 2018ರ ಮಿಸ್ ವರ್ಲ್ಡ್ ಮೆಕ್ಸಿಕೋ ದ ವೆನೆಸ್ಸಾ ಪೋನ್ಸ್ ವಿಶ್ವ ಸುಂದರಿ ಕಿರೀಟವಿಟ್ಟರು.

ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತು ನವೆಂಬರ್ 20ರಂದು ಆರಂಭವಾಗಿತ್ತು. ಹಲವು ಸುತ್ತಿನ ಸ್ಪರ್ಧೆಯ ನಂತರ ಹತ್ತು ಸ್ಪರ್ಧಿಗಳು ಫೈನಲ್ ಪ್ರವೇಶಿಸಿದ್ದರು.

2019ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ಸುಮನ್ ರಾವ್ ರಾಜಸ್ಥಾನ ಮೂಲದವರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ