ತೈವಾನ್ ಭೂಕಂಪ: 4 ಸಾವು, 255 ಮಂದಿಗೆ ಗಾಯ, ವ್ಯಾಪಕ ನಾಶ
Team Udayavani, Feb 7, 2018, 11:53 AM IST
ತೈಪೇ : ತೈವಾನ್ ಪೂರ್ವ ಕರಾವಳಿ ಸಮೀಪ 6.4 ಅಂಕಗಳ ತೀವ್ರತೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕೆ ನಾಲ್ವರು ಬಲಿಯಾಗಿದ್ದಾರೆ. ಅನೇಕ ಕಟ್ಟಡಗಳು ವಾಲಿಕೊಂಡಿವೆ ಇಲ್ಲವೇ ಹಾನಿಗೀಡಾಗಿವೆ; 140ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ನಿನ್ನೆ ಮಂಗಳವಾರ ತಡ ರಾತ್ರಿ ಸಂಭವಿಸಿದ್ದ ಈ ಭೂಕಂಪಕ್ಕೆ ಹುವಾಲಿನ್ ಗ್ರಾಮ ತೀವ್ರವಾಗಿ ತತ್ತರಿಸಿದೆ. ಇಲ್ಲಿನ ನಾಲ್ಕು ಕಟ್ಟಡಗಳು ನಿಂತಲ್ಲೇ ಸಮಾಧಿಯಾಗುವ ಸ್ಥಿತಿಯನ್ನು ತಲುಪಿವೆ. ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬರುವಂತೆ ಹಲವಾರು ಮಧ್ಯಮ ಗಾತ್ರದ ಕಟ್ಟಡಗಳು ವಿವಿಧ ಕೋನಗಳಲ್ಲಿ ತೀವ್ರವಾಗಿ ವಾಲಿಕೊಂಡಿವೆ.
ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರನ್ನು ಮೇಲಕ್ಕೆತ್ತುವ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಈ ಭೂಕಂಪದಿಂದ ಸುಮಾರು 255 ಮಂದಿ ಗಾಯಾಳುಗಳಾಗಿದ್ದಾರೆ; ಎರಡು ಡಜನ್ಗೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತೈವಾನ್ನ ಸೆಂಟ್ರಲ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ