ಥಾಯ್ಲೆಂಡ್: 146 ಹುಲಿಗಳ ಸಾವು
Team Udayavani, Sep 17, 2019, 5:47 AM IST
ಬ್ಯಾಂಕಾಕ್: ಇಲ್ಲಿನ ವಾಟ್ ಫಾ ಲುವಾಂಗ್ ಟಾ ಬುವಾ ಎಂಬ ಬೌದ್ಧ ದೇಗುಲದ ಉಸ್ತುವಾರಿಯಲ್ಲಿದ್ದ ನೂರಾರು ಹುಲಿಗಳಲ್ಲಿ 146 ಹುಲಿಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿಲ್ಲದ ಕಾರಣ, ಸಾವನ್ನಪ್ಪಿವೆ.
ದೇಗುಲದ ಬಳಿಯ ಉದ್ಯಾನದಲ್ಲಿ ಇರಿಸಲಾಗಿದ್ದ 150 ಹುಲಿಗಳು ಪ್ರವಾಸಿಗರ ಆಕರ್ಷಣೀಯ ಆಗಿದ್ದವು. ಹಲವಾರು ಪ್ರವಾಸಿಗರು ಬಂದು ಹುಲಿಗಳ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಆ ಹುಲಿಗಳನ್ನು ಸರ್ಕಾರಿ ಸ್ವಾಮ್ಯದ ಎರಡು ವನ್ಯಜೀವಿ ಸಂರಕ್ಷಣಾ ಧಾಮಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅಲ್ಲಿ ಕ್ಯಾನಿ ಡಿಸ್ಟೆಂಪರ್ ವೈರಸ್ ಎಂಬ ಸೋಂಕಿಗೆ ತುತ್ತಾಗಿದ್ದ ಹುಲಿಗಳಲ್ಲಿ ರೋಗ ನಿರೋಧಕ ಶಕ್ತಿಯೇ ಇಲ್ಲ ಎಂಬುದು ಸಾಬೀತಾಗಿತ್ತು. ದೇಗುಲದ ಉಸ್ತುವಾರಿಯಲ್ಲಿದ್ದಾಗ ಅದೇ ಹುಲಿಗಳ ನಡುವೆಯೇ ಸಂತಾನೋತ್ಪತ್ತಿ ಮಾಡಿದ್ದರ ಪರಿಣಾಮವದು. ಎಷ್ಟೇ ಚಿಕಿತ್ಸೆ ನೀಡಿದರೂ, ಅದಕ್ಕೆ ಸ್ಪಂದಿಸದ 146 ಹುಲಿಗಳು ಇತ್ತೀಚೆಗೆ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ