ಮತ್ತೆ ವ್ಯಾಪಾರ ಸಮರ ಆರಂಭ

Team Udayavani, May 11, 2019, 6:39 AM IST

ವಾಷಿಂಗ್ಟನ್‌: ಅಮೆರಿಕ ಹಾಗೂ ಚೀನ ಮಧ್ಯದ ವ್ಯಾಪಾರ ಸಮರ ಇನ್ನಷ್ಟು ತೀವ್ರಗೊಂಡಿದ್ದು, 20 ಸಾವಿರ ಕೋಟಿ ಡಾಲರ್‌ ಮೌಲ್ಯದ ಚೀನ ಉತ್ಪನ್ನಗಳ ಆಮದು ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಅಮೆರಿಕ ಬಹುತೇಕ ದುಪ್ಪಟ್ಟಾಗಿಸಿದೆ. ಎರಡೂ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಪರಿಸ್ಥಿತಿ ತಣ್ಣಗಾಗಿಸಲು ಮಾತುಕತೆಗೆ ಮುಂದಾಗಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ. ಚೀನದ ಅಧಿಕಾರಿಗಳ ಒಂದು ತಂಡ ವಾಷಿಂಗ್ಟನ್‌ಗೆ ಆಗಮಿಸಿ ಮಾತುಕತೆ ಆರಂಭಿಸಿದೆ. ನೂತನ ತೆರಿಗೆ ಏರಿಕೆ ನಿರ್ಧಾರ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. ಮೀನು, ಕೈಚೀಲಗಳು, ಬಟ್ಟೆ ಮತ್ತು ಪಾದರಕ್ಷೆಯಂತಹ ಚೀನ ಉತ್ಪನ್ನಗಳಿಗೆ ಕಳೆದ ವರ್ಷ ಶೇ. 25 ಕ್ಕೂ ಹೆಚ್ಚು ತೆರಿಗೆ ವಿಧಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ