15ರ ಇಂಜಿನಿಯರ್ಗೆ ಪಿಎಚ್.ಡಿ.?
Team Udayavani, Jul 30, 2018, 9:30 AM IST
ವಾಷಿಂಗ್ಟನ್: ಈತನಿಗೆ ಕೇವಲ 15 ವರ್ಷ. ಆದರೆ, ತನ್ನ ಶೈಕ್ಷಣಿಕ ಪಯಣದಲ್ಲಿ ಸಾಧಿಸಿದ ಮೈಲುಗಲ್ಲು ಮಾತ್ರ ಅಚ್ಚರಿ ಮೂಡಿಸುವಂಥದ್ದು. 9 ಅಥವಾ 10ನೇ ತರಗತಿಯಲ್ಲಿ ಕಲಿಯುತ್ತಿರಬೇಕಾಗಿದ್ದ ಈ ಹುಡುಗ ಈಗಾಗಲೇ ಪದವಿ ಪೂರೈಸಿದ್ದಾನೆ. ಅಷ್ಟೇ ಅಲ್ಲ, ಸದ್ಯದಲ್ಲೇ ಪಿ.ಎಚ್.ಡಿ. ಕೂಡ ಮಾಡಲಿದ್ದಾನೆ. 15 ವರ್ಷದ ಭಾರತೀಯ-ಅಮೆರಿಕನ್ ಬಾಲಕ ತನಿಷ್ಕ್ ಅಬ್ರಹಾಂನ ಸಾಧನೆಯಿದು.
ಕೇರಳ ಮೂಲದ ತಜಿ ಮತ್ತು ಬಿಜೋಯ್ ಅಬ್ರಹಾಂ ದಂಪತಿಯ ಪುತ್ರನಾದ ತನಿಷ್ಕ್ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಬಯೋಮೆಡಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪೂರೈಸಿದ್ದಾನೆ. ಇಷ್ಟಕ್ಕೇ ಮುಗಿಸದೇ, ಈಗ ಪಿಎಚ್.ಡಿ. ಮಾಡಲು ಸಿದ್ಧತೆ ನಡೆಸುತ್ತಿದ್ದಾನೆ. ‘ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ. ಕ್ಯಾನ್ಸರ್ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ಹೊಸ ವಿಧಾನಗಳನ್ನು ಕಂಡುಕೊಳ್ಳುವುದು ನನ್ನ ಗುರಿಯಾಗಿದೆ’ ಎಂದು ಹೇಳಿದ್ದಾನೆ ತಾನಿಷ್ಕ್. ಈತ ಈಗಾಗಲೇ ಸುಟ್ಟ ಗಾಯಗಳಾಗಿರುವ ರೋಗಿಗಳನ್ನು ಸ್ಪರ್ಶಿಸದೇ, ಅವರ ಹೃದಯ ಬಡಿತವನ್ನು ಅರಿಯುವಂಥ ಒಂದು ಸಾಧನವನ್ನೂ ಅಭಿವೃದ್ಧಿಪಡಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ