ಬ್ರಿಟನ್ ಸಚಿವೆ ಪ್ರೀತಿಗೆ ಮುಳುವಾಯ್ತೇ ಭೇಟಿ ?
Team Udayavani, Nov 9, 2017, 6:55 AM IST
ಲಂಡನ್: ಭಾರತೀಯ ಮೂಲದ ಬ್ರಿಟನ್ ಸಚಿವೆ ಪ್ರೀತಿ ಪಟೇಲ್ ಅವರು ಇಸ್ರೇಲ್ ಪ್ರಧಾನಿ ಸೇರಿದಂತೆ ಹಲವರೊಂದಿಗೆ ಖಾಸಗಿ ಭೇಟಿ ನಡೆಸಿದ್ದು ಇದೀಗ ತೀವ್ರ ವಿವಾದ ಸೃಷ್ಟಿಸಿದ್ದು, ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉಗಾಂಡ ಹಾಗೂ ಇಥಿಯೋಪಿಯಾ ಪ್ರವಾಸದಲ್ಲಿರುವ ಪ್ರೀತಿಯನ್ನು ಇಂಗ್ಲೆಂಡ್ ಪ್ರಧಾನಿ ಥೆರೆಸಾ ಮೇ ವಾಪಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಆಗಸ್ಟ್ನಲ್ಲಿ ಖಾಸಗಿ ಪ್ರವಾಸ ಕೈಗೊಂಡಿದ್ದಾಗ ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದು ವರದಿಯಾಗಿತ್ತು. ಇದಕ್ಕೆ ಪ್ರೀತಿ ಕ್ಷಮೆ ಕೇಳಿದ್ದು, ಅದನ್ನು ಪ್ರಧಾನಿ ಸಮ್ಮತಿಸಿದ್ದರು. ಆದರೆ ಇದೀಗ ಮತ್ತಷ್ಟು ಭೇಟಿಯ ಆರೋಪಗಳು ಕೇಳಿಬಂದಿವೆ. ಅಲ್ಲದೆ ಇಸ್ರೇಲ್ನ ಗೋಲನ್ ಹೈಟ್ಸ್ನಲ್ಲಿ ಸೇನೆ ನಡೆಸುತ್ತಿರುವ ಆಸ್ಪತ್ರೆಗಳಿಗೆ ಹಣಕಾಸು ನೆರವನ್ನು ನೀಡಲು ಇಂಗ್ಲೆಂಡ್ನ ಅನುದಾನ ಒದಗಿಸುವ ಬಗ್ಗೆ ಭೇಟಿಯಲ್ಲಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಇಸ್ರೇಲ್ ವಶದಲ್ಲಿರುವ ಗೋಲನ್ ಹೈಟ್ಸ್ ವಿವಾದಿತ ಪ್ರದೇಶ ಎಂದು ಇಂಗ್ಲೆಂಡ್ ಪರಿಗಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ