ಅಕ್ಷತಾ ವಿರುದ್ಧದ ಆರೋಪ ಸುಳ್ಳು
Team Udayavani, Apr 8, 2022, 7:08 AM IST
ಲಂಡನ್: ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ವಿರುದ್ಧದ ಆರೋಪ ಸುಳ್ಳು. ಹೀಗೆಂದು ಅವರ ವಕ್ತಾರೆ ಕ್ವಾಸಿ ಕ್ವಾರ್ಟೆಂಗ್ ಸ್ಪಷ್ಟನೆ ನೀಡಿದ್ದಾರೆ.
“ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರು ತಮ್ಮೆಲ್ಲ ನಿರ್ಧಾರಗಳಲ್ಲೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದಾರೆ. ಜನರು ಸುಖಾಸುಮ್ಮನೆ ವಿವಾದ ಸೃಷ್ಟಿಸುವುದು ಸರಿಯಲ್ಲ’ ಎಂದಿದ್ದಾರೆ.
ವಿದೇಶೀ ಆದಾಯದ ಮೇಲೆ ಕೋಟ್ಯಂತರ ರೂ. ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಯು.ಕೆ.ಯಲ್ಲಿ ನಾನ್-ಡೊಮಿಸೈಲ್ (ನಿವಾಸಿಯಲ್ಲ) ಸ್ಥಾನಮಾನ ಪಡೆದಿದ್ದಾರೆ’ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅದಕ್ಕಾಗಿ ಈ ಸ್ಪಷ್ಟನೆ ಕೊಡಲಾಗಿದೆ.
ಯುಕೆ ಕಾನೂನಿನ ಪ್ರಕಾರ, ನಿವಾಸಿಯಲ್ಲ ಸ್ಥಾನಮಾನ ಹೊಂದಿರುವವರು ಸಾಗರೋತ್ತರ ಕಂಪೆನಿಗಳ ಲಾಭಾಂಶದ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ. ಅಕ್ಷತಾ ಇನ್ಫೋಸಿಸ್ನಿಂದ ವಾರ್ಷಿಕ 114.30 ಕೋಟಿ ರೂ. ಲಾಭಾಂಶ ಪಡೆಯುತ್ತಿದ್ದಾರೆ. ಯುಕೆಯ ನಿವಾಸಿ ಎಂಬ ಸ್ಥಾನ ಮಾನ ಪಡೆದರೆ ಅವರು ಈ ಮೊತ್ತಕ್ಕೆ ತೆರಿಗೆ ಪಾವತಿ ಸಬೇಕಾಗುತ್ತದೆ. ಅದಕ್ಕಾಗಿಯೇ ಅವರು ಈ ಸ್ಥಾನ ಮಾನ ಪಡೆದಿಲ್ಲ ಎನ್ನುವುದು ವಿರೋಧಿಗಳ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು
ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ
PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ