US; ತಲೆಗೆ 50 ಬಾರಿ ಹೊಡೆದು ಭಾರತೀಯ ವಿದ್ಯಾರ್ಥಿ ಹತ್ಯೆ
Team Udayavani, Jan 30, 2024, 12:35 AM IST
ನ್ಯೂಯಾರ್ಕ್: ಭಾರತೀಯ ವಿದ್ಯಾ ರ್ಥಿಯ ತಲೆಗೆ ಮಾದಕ ವ್ಯಸನಿಯೊಬ್ಬ ಸುಮಾರು 50 ಬಾರಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಅಮೆರಿಕ ಜಾರ್ಜಿಯಾ ಪ್ರಾಂತದ ಲಿಥೋನಿಯಾ ನಗರದಲ್ಲಿ ನಡೆದಿದೆ. ಈ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹರಿಯಾಣದ ವಿವೇಕ್ ಸೈನಿ ಮೃತ ಪಟ್ಟವರು. ಕೆಲವು ದಿನಗಳ ಹಿಂದಷ್ಟೇ ಎಂಬಿಎ ಪೂರ್ಣಗೊಳಿಸಿ ದ್ದ ಇವರು, ಒಂದು ಮಳಿಗೆಯಲ್ಲಿ ಅರೆ ಕಾಲಿಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು.
ಮನೆಯಿಲ್ಲದೇ ನಿರ್ಗತಿಕನಾಗಿದ್ದ ಜೂಲಿಯನ್ ಫಾಕ್ನರ್ ಎಂಬಾತನಿಗೆ ಕಳೆದ ಎರಡು ದಿನಗಳಿಂದ ಅಂಗಡಿಯ ಬಳಿಯೇ ಉಳಿದುಕೊಳ್ಳಲು ವಿವೇಕ್ ಅವಕಾಶ ನೀಡಿದ್ದರು. ಅಲ್ಲದೇ ತಿನ್ನಲು ಚಿಪ್ಸ್, ಕೋಕ್, ನೀರು ಮತ್ತು ಜಾಕೆಟ್ ಸಹ ನೀಡಿದ್ದರು. ಆದರೆ ರವಿವಾರ ಮಾದಕ ವ್ಯಸನಿಯಾಗಿದ್ದ ಫಾಕ್ನರ್ ಏಕಾಏಕಿ ಸುತ್ತಿಗೆಯಿಂದ ವಿವೇಕ್ ಮೇಲೆ ದಾಳಿ ನಡೆಸಿದ. ತಲೆಗೆ ಸುತ್ತಿಗೆ ಯಿಂದ ಸುಮಾರು 50 ಬಾರಿ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿ ಫಾಕ್ನರ್ನನ್ನುಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ