ಫಾದರ್‌ ಆಫ್ ಆಲ್‌ ಬಾಂಬ್ಸ್: ವ್ಯಾಕ್ಯೂಮ್‌ ಬಾಂಬ್‌

Team Udayavani, Mar 2, 2022, 7:50 AM IST

ಪ್ರಾಣವಾಯು ಹೀರುವ ರಕ್ಕಸ.. ವ್ಯಾಕ್ಯೂಮ್‌ ಬಾಂಬ್‌

ಉಕ್ರೇನ್‌ನ ಹಲವಾರು ಸ್ಥಳಗಳ ಮೇಲೆ ರಷ್ಯಾ ಸೇನೆ ವ್ಯಾಕ್ಯೂಮ್‌ ಬಾಂಬ್‌ಗಳನ್ನು ಪ್ರಯೋಗಿಸುತ್ತಿರುವುದರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಸಾಂಪ್ರದಾಯಿಕ ಬಾಂಬ್‌ಗಳಿಗೆ ಹೋಲಿಸಿದರೆ, ಅತ್ಯಂತ ವಿಧ್ವಂಸಕಾರಿ ಎನಿಸಿರುವ ಈ ಬಾಂಬ್‌ಗಳ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅನೇಕ ರಾಷ್ಟ್ರಗಳು ಹಾಗೂ ಅಮ್ನೆಸ್ಟಿ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಗಳು ಒತ್ತಾಯಿಸಿವೆ.

“ವ್ಯಾಕ್ಯೂಮ್‌ ಬಾಂಬ್‌’ ವ್ಯಾಖ್ಯಾನವೇನು?
ಇದು ಸಾಂಪ್ರದಾಯಿಕ ಶೈಲಿಯ ಬಾಂಬ್‌ಗಳಿಗಿಂತ ಭಿನ್ನ. ಹೆಚ್ಚು ಸಾವು ಉಂಟು ಮಾಡುವುದೇ ಈ ಬಾಂಬ್‌ ಉಪಯೋಗದ ಮುಖ್ಯ ಉದ್ದೇಶ. ಇದರಲ್ಲಿ ಎರಡು ರೀತಿಯ ಪದಾರ್ಥಗಳಿರುತ್ತವೆ. ಒಂದು – ವಾತಾವರಣದಲ್ಲಿ ಅತ್ಯುಷ್ಣ ಉಂಟು ಮಾಡುವ ಶಕ್ತಿಶಾಲಿ ಸ್ಫೋಟಕ. ಮತ್ತೊಂದು  -ಏರೋಸೋಲ್‌ಗ‌ಳು. (ಸರಾಗವಾಗಿ ಗಾಳಿಯಲ್ಲಿ ಹರಿದಾಡುವಂಥ ರಾಸಾಯನಿಕ ಅಥವಾ ವಸ್ತುವಿನ ಸೂಕ್ಷ್ಮ ಕಣಗಳು)

ದುಷ್ಪರಿಣಾಮ ಹೇಗೆ?
ಈ ಬಾಂಬ್‌, ಒಂದು ಶೆಲ್‌ ಮಾದರಿಯಲ್ಲಿದ್ದು ಅದು ಮೂರು ವಿಭಾಗಗಳನ್ನು ಹೊಂದಿರುತ್ತದೆ. ಮೇಲು¤ದಿಯ ವಿಭಾಗದಲ್ಲಿ ಏರೋಸೋಲ್‌ ಹಾಗೂ ದ್ರವರೂಪದ ಇಂಧನವಿರುತ್ತದೆ. ಮಧ್ಯದ ವಿಭಾಗದಲ್ಲಿ ಶಕ್ತಿಶಾಲಿ ಸ್ಫೋಟಕವಿರುತ್ತದೆ. ಶೆಲ್‌ನ ಕೆಳಭಾಗದ ವಿಭಾಗದಲ್ಲಿ ಗ್ರೆನೇಡ್‌ ಹಾಗೂ ಪ್ಯಾರಾಚೂಟ್‌ ಇರುತ್ತದೆ.

ನಿರ್ದಿಷ್ಟ ಪ್ರದೇಶದಲ್ಲಿ ಈ ಬಾಂಬ್‌ ಶೆಲ್‌ ಸ್ಫೋಟಗೊಂಡಾಗ ಎರಡು ಬಾರಿ ಸ್ಫೋಟಗಳಾಗುತ್ತವೆ. ಮೊದಲ ಸ್ಫೋಟದ ವೇಳೆ ಶೆಲ್‌ನ ಮಧ್ಯಭಾಗ ಸ್ಫೋಟಗೊಂಡು, ಶೆಲ್‌ನ ಮೇಲ್ಭಾಗದಲ್ಲಿರುವ ಇಂಧನ ಹಾಗೂ ಏರೋಸೋಲ್‌ ಕಣಗಳು ಹೊರಬರುತ್ತವೆ. ದ್ರವರೂಪದ ಇಂಧನ, ಅನಿಲದ ಕಣಗಳಾಗಿ ಮಾರ್ಪಟ್ಟು ವಾತಾವರಣದಲ್ಲಿ ಹರಡುತ್ತದೆ. ಆ ಕಣಗಳೊಂದಿಗೆ ಏರೋಸೋಲ್‌ ಕಣಗಳೂ ಹರಡಿ ವಾತಾವರಣದಲ್ಲಿದ್ದ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ.

ಒಂದೆಡೆ, ಪ್ರಾಣವಾಯು ಖಾಲಿಯಾಗಿ ಜನರು ಒದ್ದಾಡುತ್ತಿರುವಾಗ, ಇತ್ತ ಶೆಲ್‌ನ ಕೆಳ ಭಾಗದಲ್ಲಿರುವ ಗ್ರೆನೇಡ್‌ಗಳು ಸ್ಫೋಟಗೊಂಡು ಅದರ ಮೂಲಕ ಬರುವ ಜ್ವಾಲೆಯು ಆ ಪ್ರಾಂತ್ಯದಲ್ಲೆಲ್ಲಾ ಹರಡಿರುವ ಇಂಧನ ಕಣಗಳಿಗೆ ತಾಗಿ ಕ್ಷಣಾರ್ಧದಲ್ಲಿ ಇಡೀ ವಾತಾವರಣವೇ ಭಸ್ಮವಾಗುತ್ತದೆ.

ಇತರ ಹೆಸರುಗಳು:
– ಥರ್ಮೋಬೋರಿಕ್‌ ಬಾಂಬ್‌
– ಏರೋಸೋಲ್‌ ಬಾಂಬ್‌

ಸಾಂಪ್ರದಾಯಿಕ ಬಾಂಬ್‌ “ವರ್ಸಸ್‌’ ವ್ಯಾಕ್ಯೂಮ್‌ ಬಾಂಬ್‌
1. ಸ್ಫೋಟಕ ಮತ್ತು ಲೋಹದ ಚೂರುಗಳ ಬಳಕೆ- ಸ್ಫೋಟಕದ ಜೊತೆಗೆ ಏರೋಸೋಲ್‌ಗ‌ಳ ಬಳಕೆ
2. ಲೋಹದ ಚೂರುಗಳಿಂದ ಮಾತ್ರ ಜನರ ಸಾವು – ಏರೋಸೋಲ್‌ ಹಾಗೂ ಗರಿಷ್ಠ ಉಷ್ಣಾಂಶದ ಮೂಲದ ಹೆಚ್ಚಿನ ಜನರ ಸಾವು.
3. ನಿರ್ದಿಷ್ಟ ವಲಯದಲ್ಲಿ ವ್ಯಾಪ್ತಿ ಹಾಗೂ ಭೀಕರತೆ – ದುಷ್ಪರಿಣಾಮ, ನಿರ್ದಿಷ್ಟ ವಲಯವನ್ನೂ ದಾಟುವ ಸಾಧ್ಯತೆ
4. ತಡೆಗೋಡೆಗಳಿದ್ದರೆ ಮನುಷ್ಯರು ಬಚಾವ್‌ ಆಗುವ ಸಾಧ್ಯತೆ – ತಡೆಗೋಡೆಗಳಾಚೆಗೆ ಇರುವ ಜನರನ್ನೂ ಕೊಲ್ಲಬಹುದಾದ ಸಾಧನ
5. ಪ್ರತಿಯೊಂದು ದೇಶದಲ್ಲೂ ಕಾನೂನಾತ್ಮಕ ನಿಷೇಧ – ಕಾನೂನಾತ್ಮಕ ನಿಷೇಧದ ಬಗ್ಗೆ ಇನ್ನೂ ನಿರ್ಧಾರವಿಲ್ಲ.

150 -200 ಕಿ.ಮೀ.
ವ್ಯಾಕ್ಯೂಮ್‌ ಬಾಂಬ್‌ ದುಷ್ಪರಿಣಾಮದ ವಲಯ
—–
ಶೇ. 75
ಸಾಂಪ್ರದಾಯಿಕ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕ ಪ್ರಮಾಣ
—–
ಶೇ. 100
ವ್ಯಾಕ್ಯೂಮ್‌ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕದ ಪ್ರಮಾಣ
————-
40 ಟನ್‌
ಪ್ರತಿಯೊಂದು ವ್ಯಾಕ್ಯೂಮ್‌ ಬಾಂಬ್‌ನ ತೂಕ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.