ಟ್ವಿಟರ್ ಬ್ಲೂಟಿಕ್ಗೆ ಪಾವತಿ ಇಲ್ಲ; ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತ ಭವನ ಸ್ಪಷ್ಟನೆ
ಉದ್ಯೋಗಿಗಳು ಬೇಕಿದ್ದರೆ ಖಾಸಗಿಯಾಗಿ ಪಾವತಿ ಮಾಡಿಕೊಳ್ಳಲು ಸಲಹೆ
Team Udayavani, Apr 4, 2023, 7:45 AM IST
ವಾಷಿಂಗ್ಟನ್:ಉದ್ಯಮಿ ಇಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ನ ಬ್ಲೂ ಟಿಕ್ ಮತ್ತು ದೃಢೀಕರಿಸಿದ ಖಾತೆಗಳಿಗೆ ಪಾವತಿ ಮಾಡುವುದಿಲ್ಲ. ಹೀಗೆಂದು ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ, ಶ್ವೇತಭವನ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ಸ್ಪಷ್ಟನೆ ನೀಡಿದೆ.
ಒಂದು ವೇಳೆ ಉದ್ಯೋಗಿಗಳು ಟ್ವಿಟರ್ ಖಾತೆ ದೃಢೀಕರಣಗೊಂಡು, ಬ್ಲೂಟಿಕ್ ಬೇಕಿದ್ದರೆ ಅದನ್ನು ಖುದ್ದಾಗಿ ಪಾವತಿ ಮಾಡಬೇಕು. ಜತೆಗೆ ಅದನ್ನು ಕ್ಲೇಮು ಮಾಡಲು ಅವಕಾಶ ಇಲ್ಲವೆಂದು ಸೂಚಿಸಿದೆ. ಇದರ ಜತೆಗೆ ಶ್ವೇತ ಭವನ ಕೂಡ ಒಂದು ಸಂಸ್ಥೆಯಾಗಿ ಅದಕ್ಕೆ ಪಾವತಿ ಮಾಡಿ, ದೃಢೀಕರಿಸಿದ ವ್ಯವಸ್ಥೆಯನ್ನು ಹೊಂದುವುದಿಲ್ಲ ಎಂದು ಹೇಳಿದೆ.
ಇದೊಂದು ಆಂತರಿಕವಾಗಿ ಕಳುಹಿಸಲಾಗಿರುವ ಇ-ಮೈಲ್ ಆಗಿದೆ. ಮುಂದಿನ ದಿನಗಳಲ್ಲಿ ಅಮೆರಿಕ ಸರ್ಕಾರದ ಇತರ ಇಲಾಖೆಗಳಿಗೂ ಇದೇ ರೀತಿಯ ಸೂಚನೆ ರವಾನೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ದೃಢೀಕರಿಸಿದ ಬೂದು ಬಣ್ಣದ ವ್ಯವಸ್ಥೆಯ ಖಾತೆ ಸದ್ಯಕ್ಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪತ್ರಿಕೆ ಖಾತೆ ರದ್ದು:
ಮತ್ತೂಂದು ಬೆಳವಣಿಗೆಯಲ್ಲಿ ಪ್ರಮುಖ ಪತ್ರಿಕೆ “ದ ನ್ಯೂಯಾರ್ಕ್ ಟೈಮ್ಸ್’ ಆಡಳಿತ ಮಂಡಳಿ ಟ್ವಿಟರ್ನ ಬ್ಲೂಟಿಕ್ಗೆ ಪಾವತಿ ಮಾಡುವುದಿಲ್ಲ ಎಂದು ಹೇಳಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಪತ್ರಿಕೆಯ ಪ್ರಧಾನ ಖಾತೆಗೆ ಇರುವ “ಗೋಲ್ಡ್ ವೆರಿಫೈಡ್ ಮಾರ್ಕರ್’ ಅನ್ನು ರದ್ದುಪಡಿಸಿದೆ. ಇದರ ಜತೆಗೆ ಇನ್ನೂ ಹಲವಾರು ಸುದ್ದಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳು ಬ್ಲೂಟಿಕ್ಗೆ ಪ್ರತಿ ತಿಂಗಳು ಪಾವತಿ ಮಾಡುವುದಿಲ್ಲ ಎಂದು ಹೇಳಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ